ADVERTISEMENT

ಚೀನಾದಲ್ಲಿ ಜನನ ಪ್ರಮಾಣ ಭಾರಿ ಇಳಿಕೆ

ಏಜೆನ್ಸೀಸ್
Published 19 ಜನವರಿ 2026, 14:15 IST
Last Updated 19 ಜನವರಿ 2026, 14:15 IST
<div class="paragraphs"><p>ಚೀನಾ</p></div>

ಚೀನಾ

   

ಬ್ಯಾಂಕಾಕ್‌: ಚೀನಾವು ಜಗತ್ತಿನ ದೊಡ್ಡಣ್ಣನಾಗುವ ಯತ್ನದಲ್ಲಿದೆ. ಆದರೆ, ಇದನ್ನು ಸಾಧಿಸಲು ಬೇಕಿರುವ ಕಾರ್ಮಿಕ ವರ್ಗದ ಕೊರತೆ ದೊಡ್ಡ ಮಟ್ಟದಲ್ಲಿದೆ. ದಶಕದಿಂದ ರೂಢಿಸಿಕೊಂಡಿರುವ ಕುಟುಂಬಕ್ಕೊಂದು ಮಗುವಿನ ಮಿತಿಯೇ ಇದಕ್ಕೆ ಮುಖ್ಯ ಕಾರಣ. ಈ ಮಿತಿಗೆ ಒಗ್ಗಿಕೊಂಡಿರುವ ಎರಡು ತಲೆಮಾರು, ಹೆಚ್ಚು ಮಕ್ಕಳು ಹೊಂದಲು ಮುಂದಾಗುತ್ತಿಲ್ಲ. ಇದು ಸರ್ಕಾರವನ್ನು ಚಿಂತೆಗೀಡು ಮಾಡಿದೆ.

ದೇಶದ ಜನಸಂಖ್ಯೆಗೆ ಸಂಬಂಧಿಸಿದ ಅಂಕಿಅಂಶಗಳನ್ನು ಸರ್ಕಾರವು ಸೋಮವಾರ ಬಿಡುಗಡೆ ಮಾಡಿದೆ. ಚೀನಾದ ಒಟ್ಟು ಜನಸಂಖ್ಯೆಯ ಶೇಕಡ 23ರಷ್ಟು ಜನರು 60 ವರ್ಷ ಮೇಲ್ಪಟ್ಟ ವೃದ್ಧರೇ ಆಗಿದ್ದಾರೆ. 1949ರಿಂದ ಇಲ್ಲಿಯವರೆಗಿನ ಲೆಕ್ಕಾಚಾರದಲ್ಲಿ ಚೀನಾದ ಜನನ ಪ್ರಮಾಣವು 2025ರಲ್ಲಿ ತೀವ್ರವಾಗಿ ಕುಸಿದಿದೆ. ಸದ್ಯ ಈಗ ಪ್ರತಿ ಸಾವಿರ ಜನರಿಗೆ ಜನನ ಪ್ರಮಾಣ ಶೇ 5.63ರಷ್ಟಿದೆ.

ADVERTISEMENT

ಹೆಚ್ಚು ಮಕ್ಕಳನ್ನು ಹೊಂದುವವರಿಗೆ ಸರ್ಕಾರವು ಭಾರಿ ಸೌಲಭ್ಯ ನೀಡುತ್ತಿದೆ. ತೆರಿಗೆ ವಿನಾಯಿತಿ, ಮದುವೆ ಮಾಡಿಸುವ ಮಧ್ಯವರ್ತಿಗೆ ಹೇರಲಾಗುತ್ತಿದ್ದ ತೆರಿಗೆ ಕಡಿತ, ಮಕ್ಕಳನ್ನು ನೋಡಿಕೊಳ್ಳುವ ಆರೈಕೆ ಕೇಂದ್ರಗಳ ಮೇಲಿನ ತೆರಿಗೆ ಕಡಿತ ಸೇರಿ ಹಲವು ಸೌಲಭ್ಯವನ್ನು ನೀಡಲು ಸರ್ಕಾರ ಮುಂದಾಗಿದೆ.

ಒಂದಕ್ಕಿಂತ ಹೆಚ್ಚು ಮಕ್ಕಳನ್ನು ಹೆರುವವರಿಗೆ ಭಾರಿ ನಿರ್ಬಂಧವನ್ನು ಈ ಹಿಂದೆ ಸರ್ಕಾರ ಹೇರಿತ್ತು. ಬಳಿಕ, ವೃದ್ಧರು, ಯುವಕರು, ದುಡಿಯುವ ವರ್ಗ ಸೇರಿ ವಿವಿಧ ವಯೋಮಾನದವರ ಜನಸಂಖ್ಯೆಯಲ್ಲಿ ಭಾರಿ ವ್ಯತ್ಯಾಸ ಕಂಡುಬಂದಿದ್ದರಿಂದ ಸರ್ಕಾರವು 2015ರಲ್ಲಿ ಇಬ್ಬರು ಮಕ್ಕಳನ್ನು ಹೆರುವುದಕ್ಕೆ ಅನುಮತಿಸಿತ್ತು. 2021ರಿಂದ ಮೂರು ಮಕ್ಕಳನ್ನು ಹೆರುವುದಕ್ಕೆ ಅವಕಾಶ ನೀಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.