ADVERTISEMENT

ಗಡಿ ಒಪ್ಪಂದ ಅನುಸರಿಸಬೇಕು: ಜೈಶಂಕರ್‌ ಆರೋಪಕ್ಕೆ ಬೀಜಿಂಗ್ ಪ್ರತಿಕ್ರಿಯೆ

ಪಿಟಿಐ
Published 14 ಫೆಬ್ರುವರಿ 2022, 14:00 IST
Last Updated 14 ಫೆಬ್ರುವರಿ 2022, 14:00 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೀಜಿಂಗ್‌: ವಾಸ್ತವ ನಿಯಂತ್ರಣ ರೇಖೆಯಲ್ಲಿ (ಎಲ್‌ಎಸಿ) ಶಾಂತಿ ಮತ್ತು ನೆಮ್ಮದಿ ನೆಲೆಸಲು ಚೀನಾ ಮತ್ತು ಭಾರತ ಗಡಿ ಒಪ್ಪಂದ ಅನುಸರಣೆಗೆ ಬದ್ಧರಾಗಿರಬೇಕು ಎಂದು ಚೀನಾದ ವಿದೇಶಾಂಗ ಸಚಿವರು ಸೋಮವಾರ ಹೇಳಿದ್ದಾರೆ.

ಎಲ್‌ಎಸಿ ಗಡಿಯಲ್ಲಿ ಪ್ರಸ್ತುತ ಉದ್ವಿಗ್ನ ಪರಿಸ್ಥಿತಿ ಉಂಟಾಗಲು ಉಭಯ ದೇಶಗಳ ಲಿಖಿತ ಗಡಿ ಒಪ್ಪಂದಗಳಿಗೆ ಚೀನಾ ಅಗೌರವ ತೋರುತ್ತಿರುವುದು ಕಾರಣ ಎಂದು ಭಾರತದ ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಆರೋಪ ಮಾಡಿದ ನಂತರ ಚೀನಾ ಈ ಪ್ರತಿಕ್ರಿಯೆ ನೀಡಿದೆ.

‘ಗಡಿ ಪ್ರದೇಶದಲ್ಲಿ ಶಾಂತಿ ಮತ್ತು ನೆಮ್ಮದಿ ಉಂಟಾಗುವಂತೆ ಮಾಡಲು ಎರಡೂ ದೇಶಗಳು ತಾವು ಸಹಿ ಮಾಡಿರುವ ಗಡಿ ಒಪ್ಪಂದದ ಅನುಸರಣೆಗೆ ಬದ್ಧರಾಗಿರಬೇಕು ಎಂದು ಚೀನಾ ಬಯಸುತ್ತದೆ’ ಎಂದು ವಿದೇಶಾಂಗ ಸಚಿವ ವಾಂಗ್‌ ವೆನ್‌ಬಿನ್‌ ಜೈಶಂಕರ್‌ ಹೇಳಿಕೆಗೆ ಪ್ರತಿಕ್ರಿಯಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.