ಭಾರತ-ಚೀನಾ
ನವದೆಹಲಿ: ಅಮೆರಿಕ ವಿಧಿಸುತ್ತಿರುವ ಸುಂಕಕ್ಕೆ ತಿರುಗೇಟು ನೀಡಲು ಮುಂದಾಗಿರುವ ಚೀನಾ, ‘ಈ ಸುಂಕ ಹೋರಾಟದಲ್ಲಿ ಚೀನಾ ಮತ್ತು ಭಾರತ ಒಟ್ಟಾಗಿ ನಿಲ್ಲಬೇಕು’ ಎಂದು ಭಾರತಕ್ಕೆ ಸಲಹೆ ನೀಡಿದೆ.
‘ಅಮೆರಿಕ ಆರಂಭಿಸಿರುವ ಸುಂಕದ ದುರ್ಬಳಕೆ ಸಡ್ಡು ಹೊಡೆಯಲು ಎರಡೂ ರಾಷ್ಟ್ರಗಳು ಒಟ್ಟಾಗಬೇಕು’ ಎಂದು ಭಾರತದಲ್ಲಿನ ರಾಯಭಾರಿ ಕಚೇರಿ ವಕ್ತಾರ ಯು ಜಿಂಗ್ ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
‘ಅಮೆರಿಕದ ಕ್ರಮವು ಭೌಗೋಳಿಕವಾಗಿ ದಕ್ಷಿಣದಲ್ಲಿರುವ ದೇಶಗಳಿಗೆ ಮಾರಕವಾಗಲಿದೆ. ವಿಶೇಷವಾಗಿ ಭಾರತ ಮತ್ತು ಚೀನಾದ ಅಭಿವೃದ್ಧಿ ಹೊಂದುವ ಹಕ್ಕನ್ನು ಕಸಿಯಲಿದೆ. ಈ ಸಂಕಷ್ಟದಿಂದ ಪಾರಾಗಲು ಎರಡೂ ದೇಶಗಳು ಜೊತೆಯಾಗಿ ನಿಲ್ಲಬೇಕಿದೆ’ ಎಂದು ಅವರು ಪ್ರತಿಪಾದಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.