ADVERTISEMENT

ಕಳೆದ 24 ಗಂಟೆಗಳಲ್ಲಿ ಚೀನಾದಲ್ಲಿ ಕೋವಿಡ್‌ ದೃಢಪಟ್ಟ 16 ಹೊಸ ಪ್ರಕರಣಗಳು

ಏಜೆನ್ಸೀಸ್
Published 19 ಜುಲೈ 2020, 6:17 IST
Last Updated 19 ಜುಲೈ 2020, 6:17 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೀಜಿಂಗ್: ಕಳೆದ 24 ಗಂಟೆಗಳಲ್ಲಿ ಚೀನಾದಲ್ಲಿ ಕೋವಿಡ್‌ ದೃಢಪಟ್ಟ 16 ಹೊಸ ಪ್ರಕರಣಗಳು ದಾಖಲಾಗಿವೆ ಎಂದು ರಾಷ್ಟ್ರೀಯ ಆರೋಗ್ಯ ಆಯೋಗದ ಮಾಹಿತಿಯನ್ನು ಉಲ್ಲೇಖಿಸಿ ಸ್ಪುಟ್ನಿಕ್ ವರದಿ ಮಾಡಿದೆ.

ಆಯೋಗದ ಮಾಹಿತಿ ಪ್ರಕಾರ, ಈ ಪ್ರಕರಣಗಳ ಪೈಕಿ 13 ಸ್ಥಳೀಯ ಪ್ರಕರಣಗಳಾಗಿದ್ದರೆ, ಉಳಿದವುಗಳು ಇತರೆಡೆಯಿಂದ ಬಂದವಾಗಿವೆ. ಚೀನಾದಲ್ಲಿ ಕಳೆದ 24 ಗಂಟೆಗಳಲ್ಲಿ 42 ಲಕ್ಷಣಗಳಿಲ್ಲದಕೊರೊನಾವೈರಸ್ ಪ್ರಕರಣಗಳು ದಾಖಲಾಗಿವೆ.

ಸ್ಪುಟ್ನಿಕ್ ವರದಿ ಪ್ರಕಾರ, ಚೀನಾದಲ್ಲಿ ಈವರೆಗೂ 78,775 ಜನರು ಗುಣಮುಖರಾಗಿದ್ದಾರೆ. ಹೊರಗಿನಿಂದ ಬಂದವರ ಒಟ್ಟು ಸಂಖ್ಯೆ 2,007 ಆಗಿದೆ.

ADVERTISEMENT

ಬೀಜಿಂಗ್‌ನಲ್ಲಿ ಸ್ಥಳೀಯವಾಗಿ ಹೊಸ ಕೋವಿಡ್ ಪ್ರಕರಣ ವರದಿಯಾಗಿಲ್ಲ

ಬೀಜಿಂಗ್‌ನಲ್ಲಿ ದೇಶೀಯವಾಗಿ ಹರಡಿದ ಹೊಸ ಕೋವಿಡ್-19 ಪ್ರಕರಣಗಳು ಶನಿವಾರ ವರದಿಯಾಗಿಲ್ಲ ಎಂದು ಪುರಸಭೆಯ ಆರೋಗ್ಯ ಆಯೋಗ ಭಾನುವಾರ ತಿಳಿಸಿದೆ. ಚೀನಾದ ರಾಜಧಾನಿ ಸತತವಾಗಿ 13 ದಿನಗಳವರೆಗೆ ದೇಶೀಯವಾಗಿ ಹರಡಿದ ಕೋವಿಡ್-19 ಪ್ರಕರಣಗಳನ್ನು ವರದಿ ಮಾಡಿಲ್ಲ ಎಂದು ಹೇಳಿದೆ.

ಯಾವುದೇ ಲಕ್ಷಣರಹಿತ ಪ್ರಕರಣಗಳು ಅಥವಾ ಶಂಕಿತ ಪ್ರಕರಣಗಳು ವರದಿಯಾಗಿಲ್ಲ. ಕೋವಿಡ್‌ನಿಂದ ಗುಣಮುಖರಾಗಿದ್ದ ಒಟ್ಟು 13 ಜನರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ಆಯೋಗ ದೈನಂದಿನ ವರದಿಯಲ್ಲಿ ತಿಳಿಸಿದೆ.

ಜೂನ್ 11 ರಿಂದ ಜುಲೈ 18 ರವರೆಗೆ ದೇಶೀಯವಾಗಿ ಹರಡಿದ 335 ಪ್ರಕರಣಗಳು ಬೀಜಿಂಗ್‌ನಲ್ಲಿ ವರದಿಯಾಗಿವೆ. ಅವರಲ್ಲಿ 132 ಮಂದಿ ಇನ್ನೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಮತ್ತು ಗುಣಮುಖರಾಗಿರುವ 203 ಜನರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಲಕ್ಷಣರಹಿತ 16 ಪ್ರಕರಣ ಮೇಲೆ ನಿಗಾವಹಿಸಲಾಗಿದೆ ಎಂದು ಆಯೋಗ ತಿಳಿಸಿದೆ.

ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಮಾಹಿತಿ ಪ್ರಕಾರ, ವಿಶ್ವದಾದ್ಯಂತ 14,241,343 ಜನರಿಗೆ ಕೊರೊನಾ ವೈರಸ್ ಸೋಂಕು ತಗುಲಿದ್ದು, ಮೃತರ ಸಂಖ್ಯೆಯು 6,01,455ಕ್ಕೆ ಏರಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.