ADVERTISEMENT

ಚೀನಾ: ಡೆಲ್ಟಾದ ಉಪತಳಿ ‘ಎವೈ.4’ ಪ್ರಕರಣಗಳು ವರದಿ

ಮೂಲ ವೈರಸ್‌ಗಿಂತಲೂ ಹೆಚ್ಚು ವೇಗದಲ್ಲಿ ಪ್ರಸರಣ, ಅಧಿಕ ಸೋಂಕುಕಾರಕ

ಪಿಟಿಐ
Published 13 ಡಿಸೆಂಬರ್ 2021, 10:46 IST
Last Updated 13 ಡಿಸೆಂಬರ್ 2021, 10:46 IST
ಚೀನಾದ ಜೆಜಿಯಾಂಗ್‌ ಪ್ರಾಂತ್ಯದಲ್ಲಿ ಕೋವಿಡ್‌–19 ‍ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಸಾಮೂಹಿಕ ಪರೀಕ್ಷೆ ಕೈಗೊಳ್ಳಲಗಿದ್ದು ನಿಂಗ್‌ಬೊ ನಗರದಲ್ಲಿ ಆರೋಗ್ಯ ಕಾರ್ಯಕರ್ತರು ಜನರ ಗಂಟಲು ದ್ರವ ಸಂಗ್ರಹಿಸುತ್ತಿರುವುದು ಕಂಡು ಬಂತು –ರಾಯಿಟರ್ಸ್‌ ಚಿತ್ರ
ಚೀನಾದ ಜೆಜಿಯಾಂಗ್‌ ಪ್ರಾಂತ್ಯದಲ್ಲಿ ಕೋವಿಡ್‌–19 ‍ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಸಾಮೂಹಿಕ ಪರೀಕ್ಷೆ ಕೈಗೊಳ್ಳಲಗಿದ್ದು ನಿಂಗ್‌ಬೊ ನಗರದಲ್ಲಿ ಆರೋಗ್ಯ ಕಾರ್ಯಕರ್ತರು ಜನರ ಗಂಟಲು ದ್ರವ ಸಂಗ್ರಹಿಸುತ್ತಿರುವುದು ಕಂಡು ಬಂತು –ರಾಯಿಟರ್ಸ್‌ ಚಿತ್ರ   

ಬೀಜಿಂಗ್: ಚೀನಾದ ಜೆಜಿಯಾಂಗ್ ಪ್ರಾಂತ್ಯದಲ್ಲಿ ಕೋವಿಡ್‌–19 ಪ್ರಕರಣಗಳಲ್ಲಿ ಹೆಚ್ಚಳ ಕಂಡುಬಂದಿದೆ. ಕೊರೊನಾ ವೈರಸ್‌ ರೂಪಾಂತರಿ ಡೆಲ್ಟಾದ ನೂತನ ಉಪತಳಿ ‘ಎವೈ.4’ ಈ ಸೋಂಕಿಗೆ ಕಾರಣ ಎಂದು ಪ್ರಾಂತ್ಯದ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.

ಚೀನಾದಲ್ಲಿ ಈ ಹೊಸ ತಳಿಯ ಸೋಂಕಿನ ಪ್ರಕರಣಗಳು ಇದೇ ಮೊದಲ ಬಾರಿಗೆ ವರದಿಯಾಗಿವೆ. ಈ ಉಪತಳಿ ಸೋಂಕಿನ 138 ಪ್ರಕರಣಗಳು ವರದಿಯಾಗಿದ್ದು, ಈ ಹಿನ್ನೆಲೆಯಲ್ಲಿ, ಜಿಜಿಯಾಂಗ್‌ ಪ್ರಾಂತ್ಯದ ಜನರು ಪ್ರಯಾಣ ಕೈಗೊಳ್ಳುವುದನ್ನು ಸರ್ಕಾರ ನಿಷೇಧಿಸಿದೆ ಎಂದು ಸರ್ಕಾರಿ ಒಡೆತನದ ಸುದ್ದಿವಾಹಿನಿ ಸಿಜಿಟಿಎನ್‌–ಟಿವಿ ವರದಿ ಮಾಡಿದೆ.

‘ಪ್ರಾಂತ್ಯದ ರಾಜಧಾನಿ ಹ್ಯಾಂಗ್‌ಜೌನಲ್ಲಿ 17 ಪ್ರಕರಣಗಳು, ನಿಂಗ್‌ಬೊ ಹಾಗೂ ಶಾವೊಜಿಂಗ್ ನಗರಗಳಲ್ಲಿ ಕ್ರಮವಾಗಿ 44 ಹಾಗೂ 77 ಪ್ರಕರಣಗಳು ವರದಿಯಾಗಿವೆ. ಈ ಸೋಂಕಿಗೆ ವೈರಸ್‌ನ ಡೆಲ್ಟಾ ತಳಿಯ ಉಪತಳಿಯಾದ ‘ಎವೈ.4’ ಕಾರಣ ಎಂಬುದು ಜಿನೋಮ್‌ ಸೀಕ್ವೆನ್ಸಿಂಗ್’ನಿಂದ ದೃಢಪಟ್ಟಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ADVERTISEMENT

ಈ ಉಪತಳಿಯ ಸೋಂಕು ಹೆಚ್ಚು ವೇಗವಾಗಿ ಪ್ರಸರಣಗೊಳ್ಳುವುದಲ್ಲದೇ, ಮೂಲ ವೈರಸ್‌ಗಿಂತಲೂ ಅಧಿಕ ಸೋಂಕುಕಾರಕ ಎಂದು ಜೆಜಿಯಾಂಗ್‌ ಪ್ರಾಂತ್ಯದ ರೋಗ ನಿಯಂತ್ರಣ ಕೇಂದ್ರ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.