ADVERTISEMENT

‘ಕೋವಿಡ್‌‘ ಮೂಲದ ಅಧ್ಯಯನ ಯೋಜನೆ ಆಘಾತಕಾರಿ: ಚೀನಾ

ಏಜೆನ್ಸೀಸ್
Published 22 ಜುಲೈ 2021, 6:59 IST
Last Updated 22 ಜುಲೈ 2021, 6:59 IST
ಝೆಂಗ್‌ ಯಿಕ್ಸಿನ್‌
ಝೆಂಗ್‌ ಯಿಕ್ಸಿನ್‌   

ಬೀಜಿಂಗ್‌: ವಿಶ್ವ ಆರೋಗ್ಯ ಸಂಸ್ಥೆಯು ‘ಕೋವಿಡ್‌–19‘ ಸಾಂಕ್ರಾಮಿಕದ ಮೂಲದ ಬಗ್ಗೆ ಎರಡನೇ ಹಂತದ ಅಧ್ಯಯನ ನಡೆಸಲು ರೂಪಿಸಿರುವ ಯೋಜನೆ ಆಘಾತಕಾರಿ ಎಂದು ಚೀನಾದ ಹಿರಿಯ ಆರೋಗ್ಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಪ್ರಯೋಗಾಲಯದಿಂದ ವೈರಸ್ ಸೋರಿಕೆಯಾಗಿದೆ ಎಂಬ ವದಂತಿ‘ಯನ್ನು ತಳ್ಳಿ ಹಾಕಿದ ರಾಷ್ಟ್ರೀಯ ಆರೋಗ್ಯ ಆಯೋಗದ ಉಪ ಸಚಿವ ಝೆಂಗ್ ಯಿಕ್ಸಿನ್‌, ‘ ಇದು ಸಾಮಾನ್ಯ ಜ್ಞಾನಕ್ಕೆ ವಿರುದ್ಧವಾದ ಸಿದ್ಧಾಂತವಾಗಿದೆ‘ ಎಂದು ಹೇಳಿದ್ದಾರೆ.

‘ಪ್ರಯೋಗಾಲಯದಿಂದ ವೈರಸ್ ಸೋರಿಕೆಯಾಗಿದೆ‘ ಎಂಬ ವದಂತಿ, ವಿಜ್ಞಾನಕ್ಕೆ ವಿರುದ್ಧವಾದದು‘ ಎಂದೂ ಅವರು ಹೇಳಿದ್ದಾರೆ.

ADVERTISEMENT

‘ಚೀನಾದ ಪ್ರಯೋಗಾಲಯದಿಂದ ಕೊರೊನಾ ವೈರಸ್ ಸೋರಿಕೆ ಮತ್ತು ಸಾಂಕ್ರಾಮಿಕ ರೋಗದ ನಡುವಿನ ಸಂಭಾವ್ಯ ಸಂಬಂಧವನ್ನು ತಕ್ಷಣದಲ್ಲೇ ತಳ್ಳಿ ಹಾಕಲು ಸಾಧ್ಯವಿಲ್ಲ‘ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥರು ಕಳೆದ ವಾರ ಒಪ್ಪಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.