ADVERTISEMENT

ಅಮೆರಿಕ ಮುಂದಿನ ಗುರಿ ನಾವೇ: ಚೀನಾದಿಂದ ರಷ್ಯಾ ಪರ ಜನಾಂದೋಲನಕ್ಕೆ ಯತ್ನ

ಏಜೆನ್ಸೀಸ್
Published 5 ಮಾರ್ಚ್ 2022, 19:32 IST
Last Updated 5 ಮಾರ್ಚ್ 2022, 19:32 IST
ಕ್ಸಿ ಜಿನ್ ಪಿಂಗ್
ಕ್ಸಿ ಜಿನ್ ಪಿಂಗ್   

ಸಿಂಗಪುರ:ವಿಶ್ವದ ಮೇಲೆ ಹಿಡಿತ ಸಾಧಿಸಬೇಕು ಎಂಬ ಆಕಾಂಕ್ಷೆ ಹೊಂದಿರುವ ಅಮೆರಿಕವು ಇದಕ್ಕಾಗಿ ಈಗ ರಷ್ಯಾವನ್ನು ಗುರಿಯಾಗಿಸಿಕೊಂಡಿದೆ. ಈಗ ರಷ್ಯಾ ನಾಶವಾದರೆ, ಅಮೆರಿಕದ ಮುಂದಿನ ಗುರಿ ನಾವೇ ಆಗಿರಲಿದ್ದೇವೆ ಎಂದು ಚೀನಾ ಸರ್ಕಾರ ಹೇಳಿದೆ.

ಹೀಗಾಗಿ ನಾವು ಯಾವುದೇ ಕಾರಣ ಮತ್ತು ಯಾವುದೇ ಹಂತದಲ್ಲಿ ರಷ್ಯಾವನ್ನು ಬಿಟ್ಟುಕೊಡಲೇಬಾರದು ಎಂಬ ಜನಾಭಿಪ್ರಾಯವನ್ನು ಮೂಡಿಸುವ ಕೆಲಸಕ್ಕೆ ಚೀನಾ ಕೈಹಾಕಿದೆ. ಇದಕ್ಕಾಗಿ ದೇಶದ ಮಾಧ್ಯಮಗಳಲ್ಲಿ ರಷ್ಯಾ ವಿರುದ್ಧದ ಅಂಶಗಳನ್ನು ಪ್ರಕಟಿಸಬಾರದು ಎಂಬ ಸ್ಪಷ್ಟ ಸೂಚನೆಯನ್ನೂ ನೀಡಲಾಗಿದೆ ಎಂದು ತಿಳಿದುಬಂದಿದೆ.

ಶಾಲಾ ಪಠ್ಯಕ್ರಮದಿಂದಲೇ ಅಮೆರಿಕ ವಿರೋಧಿ ನಿಲುವ ಪೋಷಿಸುತ್ತಿರುವ ಚೀನಾ ಸರ್ಕಾರ, ಜಾಗತಿಕ ಮಟ್ಟದಲ್ಲಿ ನಾಯಕನಾಗಿ ಹೊರಹೊಮ್ಮುವ ಚೀನಾದ ಸಾಮರ್ಥ್ಯಕ್ಕೆ ತಡೆಯೊಡ್ಡಲು ಅಮೆರಿಕ ಯತ್ನಿಸುತ್ತಿದೆ. ರಷ್ಯಾದ ಕಳವಳಗಳನ್ನು ಅರ್ಥೈಸಿಕೊಳ್ಳದ ಅಮೆರಿಕ ಮತ್ತು ಯುರೋಪ್ ಒಕ್ಕೂಟಗಳೇ ಈ ಯುದ್ಧಕ್ಕೆ ನೇರ ಕಾರಣ. ತನ್ನ ನೆರೆಯ ಪ್ರಜಾಪ್ರಭುತ್ವ ರಾಷ್ಟ್ರವನ್ನು ನ್ಯಾಟೊ ಕೂಟಕ್ಕೆ ಸೇರಿಸಿಕೊಳ್ಳಬಹುದು ಎಂಬ ಭೀತಿಯಿಂದಾಗಿ ಈ ಯುದ್ಧ ಸಾರಲಾಗಿದೆ ಎಂದು ಚೀನಾ ರಷ್ಯಾವನ್ನು ಸಮರ್ಥಿಸಿಕೊಂಡಿದೆ.

ADVERTISEMENT

ದೇಶದ ನಿಲುವೇ ನಮ್ಮ ನಿಲುುವು ಎಂದು ಪ್ರಕಟಿಸಿರುವ ಚೀನಾದ ಕ್ಯಾಪಿಟಲ್ ನ್ಯೂಸ್ ಎಂಬ ಚೀನಾ ಪತ್ರಿಕೆ, ಚೀನಾ ಎಂದಿಗೂ ಜವಾಬ್ದಾರಿಯುತ ಸ್ಥಾನ ನಿರ್ವಹಿಸುತ್ತದೆ. ಆದರೆ ಉಕ್ರೇನ್ ರಷ್ಯಾ ಮತ್ತು ಯುರೋಪ್ ದೇಶಗಳ ಮಧ್ಯೆ ತಟಸ್ಥವಾಗಿರಬೇಕು ಎಂಬ ರಷ್ಯಾದ ಬೇಡಿಕೆಯನ್ನು ಸಮರ್ಥಿಸಿಕೊಂಡಿದೆ. ಅಲ್ಲದೆ ಉಕ್ರೇನ್ ಪೂರ್ವ ಮತ್ತು ಪಶ್ಚಿಮ ದೇಶಗಳ ಮಧ್ಯೆ ಸೇತುವೆಯಂತಿರಬೇಕು. ಆದರೆ ವಿಶ್ವದ ಶಕ್ತಿಯುತ ದೇಶಗಳ ನಡುವಿನ ತಿಕ್ಕಾಟಕ್ಕೆ ವೇದಿಕೆಯಾಗಬಾರದು ಎಂದು ಅದು ಅಭಿಪ್ರಾಯಪಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.