ADVERTISEMENT

ಅಮೆರಿಕ ಉತ್ಪನ್ನಗಳ ಆಮದು: ಶೇ 15ರಷ್ಟು ಸುಂಕ ಹೆಚ್ಚಿಸಿದ ಚೀನಾ

ಏಜೆನ್ಸೀಸ್
Published 4 ಮಾರ್ಚ್ 2025, 16:24 IST
Last Updated 4 ಮಾರ್ಚ್ 2025, 16:24 IST
-
-   

ಬೀಜಿಂಗ್: ಅಮೆರಿಕದಿಂದ ಆಮದು ಮಾಡಿಕೊಳ್ಳಲಾಗುವ ಚಿಕನ್‌, ಹಂದಿ ಮಾಂಸ, ಗೋಮಾಂಸ ಹಾಗೂ ಸೋಯಾ ಉತ್ಪನ್ನಗಳ ಮೇಲೆ ಹೆಚ್ಚುವರಿಯಾಗಿ ಶೇ 15ರವರೆಗೆ ಸುಂಕ ವಿಧಿಸುವುದಾಗಿ ಚೀನಾ ಮಂಗಳವಾರ ಘೋಷಿಸಿದೆ.

ವಾಣಿಜ್ಯ ಸಚಿವಾಲಯ ಘೋಷಿಸಿರುವ ಈ ಸುಂಕ ಹೆಚ್ಚಳವು ಮಾರ್ಚ್ 10ರಿಂದ ಜಾರಿಗೆ ಬರಲಿದೆ. 

ಚೀನಾದಿಂದ ಆಮದು ಮಾಡಿಕೊಳ್ಳಲಾಗುವ ಉತ್ಪನ್ನಗಳ ಮೇಲೆ ವಿಧಿಸುವ ಸುಂಕವನ್ನು ಶೇ 20ಕ್ಕೆ ಹೆಚ್ಚಳ ಮಾಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಕ್ರಮಕ್ಕೆ ಪ್ರತಿಯಾಗಿ ಚೀನಾ ಈ ನಿರ್ಧಾರ ಕೈಗೊಂಡಿದೆ. ಅಮೆರಿಕದ ಸುಂಕ ಹೆಚ್ಚಳ ಮಂಗಳವಾರದಿಂದ ಜಾರಿಗೆ ಬಂದಿದೆ.

ADVERTISEMENT

ಅಮೆರಿಕದಿಂದ ಆಮದು ಮಾಡಿಕೊಳ್ಳಲಾಗುವ ಚಿಕನ್, ಗೋಧಿ, ಏಕದಳ ಧಾನ್ಯಗಳು, ಅರಳೆಗೆ ಹೆಚ್ಚುವರಿ ಶೇ 15ರಷ್ಟು ಸುಂಕ ವಿಧಿಸಲಾಗುತ್ತದೆ. ಜೋಳ, ಸೋಯಾಬೀನ್, ಹಂದಿ ಮಾಂಸ, ಗೋಮಾಂಸ, ಹಣ್ಣುಗಳು, ತರಕಾರಿಗಳು ಹಾಗೂ ಡೇರಿ ಉತ್ಪನ್ನಗಳ ಮೇಲಿನ ಸುಂಕವನ್ನು ಶೇ 10ರಷ್ಟು ಹೆಚ್ಚಿಸಲಾಗಿದೆ ಎಂದು ಚೀನಾ ವಾಣಿಜ್ಯ ಸಚಿವಾಲಯ ಹೇಳಿದೆ.

ಜೊತೆಗೆ, ಅಮೆರಿಕದ 10 ಕಂಪನಿಗಳನ್ನು ‘ವಿಶ್ವಾಸಾರ್ಹವಲ್ಲದ ಸಂಸ್ಥೆಗಳ ಪಟ್ಟಿ’ಯಲ್ಲಿ ಸೇರ್ಪಡೆ ಮಾಡಲಾಗಿದೆ. ಈ ಕಂಪನಿಗಳ ಹಿರಿಯ ಅಧಿಕಾರಿಗಳು ಚೀನಾ ಪ್ರವೇಶಿಸುವುದನ್ನು ಕೂಡ ನಿರ್ಬಂಧಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.