ADVERTISEMENT

ಅಂತರರಾಷ್ಟ್ರೀಯ ಪ್ರಯಾಣಿಕರಿಗಿದ್ದ ಕೋವಿಡ್ ನಿರ್ಬಂಧ ಸಡಿಲಿಸಿದ ಚೀನಾ

ಪಿಟಿಐ
Published 27 ಡಿಸೆಂಬರ್ 2022, 7:54 IST
Last Updated 27 ಡಿಸೆಂಬರ್ 2022, 7:54 IST
   

ಬೀಜಿಂಗ್: ಸಾರ್ವಜನಿಕರ ಪ್ರತಿಭಟನೆ ಬೆನ್ನಲ್ಲೇ ಶೂನ್ಯ ಕೋವಿಡ್‌ ನಿಯಮವನ್ನು ಸಡಿಲಿಸಿದ್ದ ಚೀನಾ ಸರ್ಕಾರ, ಇದೀಗ ಜನವರಿ 8ರಿಂದ ಅಂತರರಾಷ್ಟ್ರೀಯ ಪ್ರಯಾಣಿಕರ ಮೇಲಿನ ನಿರ್ಬಂಧಗಳನ್ನು ತೆಗೆದುಹಾಕಲು ನಿರ್ಧರಿಸಿದೆ.

ದೇಶದಲ್ಲಿ ಕೋವಿಡ್ ನಿರ್ವಹಣಾ ಮಾರ್ಗಸೂಚಿಯನ್ನು ಮುಂದಿನ ತಿಂಗಳಿಂದ ‘ಕ್ಲಾಸ್–ಎನಿಂದ ಕ್ಲಾಸ್–ಬಿ’ಗೆ ಇಳಿಸಲಾಗುತ್ತಿದೆ ಎಂದು ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗ(ಎನ್‌ಎಚ್‌ಸಿ) ಹೇಳಿದೆ.

ಜನವರಿ 8ರಿಂದ ದೇಶಕ್ಕೆ ಬರುವ ಪ್ರಯಾಣಿಕರಿಗೆ ಕ್ವಾರಂಟೈನ್ ರದ್ದು ಮಾಡಲಾಗಿದೆ ಎಂದು ಅದು ಹೇಳಿದೆ.

ADVERTISEMENT

ಈ ಮೊದಲು ಅಂತರರಾಷ್ಟ್ರೀಯ ಪ್ರಯಾಣಿಕರಿಗೆ ಸರ್ಕಾರಿ ಸಂಸ್ಥೆಗಳಲ್ಲಿ 15 ದಿನ ಕ್ವಾರಂಟೈನ್ ವಿಧಿಸಲಾಗುತ್ತಿತ್ತು. ಆ ಬಳಿಕ, 3 ದಿನ ನಿಗಾ ಒಳಗೊಂಡಂತೆ 5 ದಿನ ಪ್ರತ್ಯೇಕವಾಸ ಇರುತ್ತಿತ್ತು.

ಕೊರೊನಾದ ಹೊಸ ರೂಪಾಂತರ ತಳಿ ಬಿಎಫ್‌–7ನಿಂದ ಚೀನಾದಲ್ಲಿ ಕೋವಿಡ್ ಪ್ರಕರಣಗಳು ತೀವ್ರ ಪ್ರಮಾಣದಲ್ಲಿ ಹೆಚ್ಚಿರುವ ಹೊತ್ತಿನಲ್ಲೇ ಚೀನಾ ಅಂತರರಾಷ್ಟ್ರೀಯ ಪ್ರಯಾಣಿಕರ ಕ್ವಾರಂಟೈನ್ ನಿಯಮ ತೆರವಿಗೆ ಮುಂದಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಚೀನಾದ ಆರೋಗ್ಯ ಇಲಾಖೆ ಅಧಿಕಾರಿಗಳು, ಓಮೈಕ್ರಾನ್‌ನ ಬಿಎಫ್‌–7, ಡೆಲ್ಟಾದಷ್ಟು ಮಾರಕವಲ್ಲ ಎಂದು ಹೇಳಿದ್ದಾರೆ.

2020ರಿಂದ ಕೋವಿಡ್ ಅನ್ನು ವ್ಯಾಪಕವಾಗಿ ಹರಡುವ ಎ ಕೆಟಗರಿ ಸಾಂಕ್ರಾಮಿಕ ರೋಗದ ವ್ಯಾಪ್ತಿಗೆ ಸೇರಿಸಲಾಗಿತ್ತು.

ಚೀನಾ ಗಡಿ ಮೂಲಕ ದೇಶಕ್ಕೆ ಬರುವವರಲ್ಲಿ ಸೋಂಕು ಕಂಡುಬಂದರೆ ಪ್ರತ್ಯೇಕವಾಸ ಇರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.