ADVERTISEMENT

ತನಿಖೆಗೆ ಮೊದಲೇ ವುಹಾನ್‌ ಮಾರುಕಟ್ಟೆ ಸ್ವಚ್ಛ: ಆರೋಪ

ಪಿಟಿಐ
Published 27 ಜುಲೈ 2020, 15:35 IST
Last Updated 27 ಜುಲೈ 2020, 15:35 IST
ವುಹಾನ್‌ನ ಮಾರುಕಟ್ಟೆ
ವುಹಾನ್‌ನ ಮಾರುಕಟ್ಟೆ   

ಬೀಜಿಂಗ್‌: ವುಹಾನ್‌ನ ವನ್ಯಜೀವಿ ಮಾರುಕಟ್ಟೆಯಲ್ಲಿ ಕೊರೊನಾ ವೈರಸ್‌ ಕುರಿತ ಸಾಕ್ಷ್ಯಗಳನ್ನು ಸ್ಥಳೀಯ ಆಡಳಿತ ನಾಶಮಾಡಿದೆ ಎಂದು ವೈದ್ಯರೊಬ್ಬರು ಆರೋಪಿಸಿದ್ದಾರೆ. ತನಿಖೆ ಆರಂಭವಾಗುವ ಮೊದಲೇ ಪೂರಕ ಸಾಕ್ಷ್ಯಗಳು ನಾಶವಾಗಿದ್ದವು ಎಂದು ಅವರು ದೂರಿದ್ದಾರೆ.

‘ತನಿಖೆಗೆ ಸಹಾಯ ಮಾಡಲು ವುಹಾನ್‌ನ ಮಾರುಕಟ್ಟೆಗೆ ಹೋಗಿದ್ದಾಗ ಅಲ್ಲಾಗಲೇ ಭೌತಿಕ ಸಾಕ್ಷ್ಯಗಳನ್ನು ನಾಶಗೊಳಿಸಲಾಗಿತ್ತು. ಇದರಿಂದಾಗಿ ವೈದ್ಯಕೀಯ ಸಂಶೋಧನೆಗಳ ಗತಿ ನಿಧಾನವಾಯಿತು’ ಎಂದು ಹಾಂಗ್‌ಕಾಂಗ್‌ನ ವಿಜ್ಞಾನಿ ಪ್ರೊ. ಕ್ವಾಕ್‌ ಯುಂಗ್‌ ಯುಯೆನ್‌ ಅವರು ‘ಬಿಬಿಸಿ’ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ.

‘ಮಾರುಕಟ್ಟೆಯನ್ನು ಸ್ವಚ್ಛಗೊಳಿಸಲಾಗಿತ್ತು. ಅಲ್ಲಿದ್ದವರನ್ನು ಎತ್ತಂಗಡಿ ಮಾಡಲಾಗಿತ್ತು. ವಹಿವಾಟು ಎಂದಿನಂತೆ ಇರಲಿಲ್ಲ. ವೈರಸ್‌ ಯಾವುದರಿಂದ ಮಾನವನಿಗೆ ಬಂದಿರಬಹದು ಎಂಬುದನ್ನು ಗುರುತಿಸಲು ಕಷ್ಟವಾಗಿತ್ತು’ ಎಂದು ಹೇಳಿದ್ದಾರೆ.

ADVERTISEMENT

‘ಎಲ್ಲವನ್ನು ಮುಚ್ಚಿಹಾಕಿರುವ ಸಂಶಯ ಇದೆ. ಮಾಹಿತಿಯನ್ನು ನೀಡಬೇಕಾದ ಸ್ಥಳೀಯ ಅಧಿಕಾರಿಗಳು ಎಲ್ಲದಕ್ಕೂ ಹಿಂದೇಟು ಹಾಕಿದರು’ ಎಂದು ವಿವರಿಸಿದ್ದಾರೆ.

ಚೀನಾದ ವುಹಾನ್‌ನಲ್ಲಿರುವ ಹುನಾನ್‌ ವನ್ಯಜೀವಿ ಮಾರುಕಟ್ಟೆಯು ಕೊರೊನಾ ವೈರಸ್‌ನ ಮೂಲವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.