ADVERTISEMENT

ಕೊರೊನಾ ವೈರಸ್‌ ಮೊದಲು ಪತ್ತೆ ಹಚ್ಚಿದ್ದ ವೈದ್ಯನೂ ಸೋಂಕಿಗೆ ಬಲಿ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2020, 5:33 IST
Last Updated 7 ಫೆಬ್ರುವರಿ 2020, 5:33 IST
ಸೋಂಕು ತಗುಲಿದ್ದ ವೈದ್ಯ
ಸೋಂಕು ತಗುಲಿದ್ದ ವೈದ್ಯ   

ಬೀಜಿಂಗ್‌:ಮಾರಣಾಂತಿಕ ಕೊರೊನಾ ವೈರಸ್ ಕುರಿತು ಮೊದಲಿಗೆ ಎಚ್ಚರಿಕೆ ನೀಡಿದ್ದ ವೈದ್ಯರಲ್ಲಿ ಒಬ್ಬರಾಗಿದ್ದ ಲಿ ವೆನ್‌ಲಿಯಾಂಗ್‌ ಅವರೇ ಸೋಂಕಿಗೆ ಬಲಿಯಾಗಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

34 ವರ್ಷದ ಲಿಯಾಂಗ್‌ ಅವರು ವುಹಾನ್‌ ನಗರದ ನಿವಾಸಿ ಎಂದು ಗ್ಲೋಬಲ್‌ ಟೈಮ್ಸ್ ವರದಿ ಮಾಡಿದೆ.

ವುಹಾನ್‌ ನಗರದ ಸೀಫುಡ್ ಮಾರ್ಕೆಟ್‌ನ ಏಳು ಮಂದಿ ಸಾರ್ಸ್‌ ಮಾದರಿಯ ವೈರಸ್‌ ಪೀಡಿತರಾಗಿದ್ದಾರೆ ಎಂದು ವೈದ್ಯಕೀಯ ಕ್ಷೇತ್ರದ ಸಹೋದ್ಯೋಗಿಗಳಿಗೆ ವಿ–ಚಾಟ್‌ ಆ್ಯಪ್‌ ಮೂಲಕ ಸಂದೇಶ ರವಾನಿಸಿದ್ದರು ಎಂದು ವರದಿ ತಿಳಿಸಿದೆ.

ADVERTISEMENT

ಡಬ್ಲ್ಯುಎಚ್‌ಒ ಮಾರ್ಗಸೂಚಿ ಉಲ್ಲಂಘನೆ

‘ಚೀನಾಗೆವಿಮಾನ ಹಾರಾಟ ನಿಷೇಧಿಸುವ ಮೂಲಕ ಹಲವು ರಾಷ್ಟ್ರಗಳು ಜನರಲ್ಲಿ ಕೊರೊನಾ ಬಗ್ಗೆ ಭೀತಿ ಹುಟ್ಟಿಸುತ್ತಿವೆ. ಈ ನಿರ್ಧಾರಗಳು ವಿಶ್ವ ಆರೋಗ್ಯ ಸಂಸ್ಥೆಯ(ಡಬ್ಲ್ಯುಎಚ್‌ಒ) ಮಾರ್ಗಸೂಚಿಯನ್ನು ಉಲ್ಲಂಘಿಸುತ್ತವೆ ಎಂದು ಚೀನಾ ಹೇಳಿದೆ.

ಡಬ್ಲ್ಯುಎಚ್‌ಒ ಶಿಫಾರಸಿನ ವಿರುದ್ಧ ಹೋದ ರಾಷ್ಟ್ರಗಳನ್ನು ನಾವು ವಿರೋಧಿಸುತ್ತೇವೆ’ ಎಂದು ವಿದೇಶಾಂಗ ಇಲಾಖೆ ವಕ್ತಾರರಾದ ಹುವಾ ಚುನ್ಯಿಂಗ್‌ ತಿಳಿಸಿದರು. ಇಂಡಿಗೊ, ಏರ್‌ ಇಂಡಿಯಾ ಸೇರಿದಂತೆ ಹಲವು ಅಂತರರಾಷ್ಟ್ರೀಯ ಏರ್‌ಲೈನ್ಸ್‌ ಕಂಪನಿಗಳು ಚೀನಾಗೆ ವಿಮಾನ ಹಾರಾಟ ನಿಷೇಧಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.