ಬೀಜಿಂಗ್: ಚೀನಾದಲ್ಲಿ ತೀವ್ರಗೊಂಡಿರುವ ಬರಗಾಲದಿಂದಾಗಿ ಜಲಾಶಯಗಳಲ್ಲಿ ನೀರಿನ ಮಟ್ಟ ಇಳಿಕೆಯಾಗಿದೆ. ಇದರಿಂದ ಜಲಶಕ್ತಿಯಿಂದ ವಿದ್ಯುತ್ ಉತ್ಪಾದನೆ ಕುಂಠಿತಗೊಂಡಿದ್ದು, ದೇಶದ ನೈರುತ್ಯ ಭಾಗದ ಬಹುತೇಕ ಕಾರ್ಖಾನೆಗಳು ಕಾರ್ಯವನ್ನು ಸ್ಥಗಿತಗೊಳಿಸಿವೆ.
ಸಿಚುವಾನ್ ಪ್ರಾಂತ್ಯದ ಸೋಲಾರ್ ಪ್ಯಾನಲ್, ಸಿಮೆಂಟ್, ಯೂರಿಯಾ ಕಾರ್ಖಾನೆಗಳು ಕಾರ್ಯ ಸ್ಥಗಿತಗೊಳಿಸಿವೆ ಅಥವಾ ಉತ್ಪಾದನೆಯನ್ನು ಕಡಿಮೆಗೊಳಿಸಿವೆ. ಹವಾನಿಯಂತ್ರಿತ ವ್ಯವಸ್ಥೆ ಹೆಚ್ಚಾಗಿ ಅಗತ್ಯವಿರುವ ಬೇಸಿಗೆಯಲ್ಲಿಯೇ ದೇಶದ ವಿದ್ಯುತ್ ಉತ್ಪಾದನೆ ಕುಸಿತವಾಗಿದೆ.
ವಿದ್ಯುತ್ ಕೊರತೆಯಿಂದ ದೇಶದ ವಿವಿಧೆಡೆ ವಿದ್ಯುತ್ ವ್ಯತ್ಯಯ ಉಂಟಾಗುತ್ತಿದ್ದು, ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷಕ್ಕೆ ಇದು ಸವಾಲಾಗಿ ಪರಿಣಮಿಸಿದೆ. ದಶಕದಿಂದ ಚೀನಾದ ನಾಯಕತ್ವ ವಹಿಸಿರುವ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರಿಗೂ ಇದು ತಲೆನೋವು ತರಿಸಿದೆ. ಮುಂದಿನ ಐದು ವರ್ಷ ತನ್ನ ನಾಯಕತ್ವವನ್ನೇ ಮುಂದುವರಿಸಲು ಬಯಸಿರುವ ಜಿನ್‌ಪಿಂಗ್‌ಗೆ ವಿದ್ಯುತ್ ಸಮಸ್ಯೆ ಪರಿಹರಿಸುವುದು ದೊಡ್ಡ ಸವಾಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.