ADVERTISEMENT

ಚೀನಾ ಹ್ಯಾಕರ್‌ಗಳಿಂದ ಸೈಬರ್‌ ದಾಳಿಗೆ ಯತ್ನ: ಎಫ್‌ಬಿಐ ನಿರ್ದೇಶಕ

ಏಜೆನ್ಸೀಸ್
Published 31 ಜನವರಿ 2024, 13:43 IST
Last Updated 31 ಜನವರಿ 2024, 13:43 IST
.
.   

ವಾಷಿಂಗ್ಟನ್‌ (ರಾಯಿಟರ್ಸ್‌): ಚೀನಾ ಸರ್ಕಾರದ ಜೊತೆ ನಂಟು ಹೊಂದಿರುವ ಹ್ಯಾಕರ್‌ಗಳು ಅಮೆರಿಕದ ಪ್ರಮುಖ ಮೂಲಸೌಕರ್ಯ ಜಾಲಗಳನ್ನು ಗುರಿಯಾಗಿಸಿ ಸೈಬರ್‌ ದಾಳಿ ನಡೆಸಲು ಯತ್ನಿಸುತ್ತಿದ್ದಾರೆ ಎಂದು ಎಫ್‌ಬಿಐ ನಿರ್ದೇಶಕ ಕ್ರಿಸ್ಟೋಫರ್‌ ವ್ರೇ ‌ಹೇಳಿದ್ದಾರೆ.

ವಿದ್ಯುತ್‌ ಗ್ರಿಡ್‌, ತೈಲ ಮತ್ತು ನೈಸರ್ಗಿಕ ಅನಿಲ ಪೈಪ್‌ಲೈನ್‌ ಹಾಗೂ ಸಾಗಣೆ ಜಾಲಗಳನ್ನು ಹ್ಯಾಕರ್‌ಗಳು ಮುಖ್ಯವಾಗಿ ಗುರಿಯಾಗಿಸಿದ್ದಾರೆ ಎಂದು ಅವರು ವಿವರಿಸಿದ್ದಾರೆ.

ಈ ಮಾಹಿತಿಯನ್ನು ಕ್ರಿಸ್ಟೋಫರ್‌ ಅವರು ಅಮೆರಿಕದ ಸಂಸತ್‌ನ ಸಮಿತಿ ಮುಂದೆ ತಿಳಿಸಲಿದ್ದಾರೆ ಎಂದು ಎಫ್‌ಬಿಐ ಹೇಳಿಕೆಯಲ್ಲಿ ತಿಳಿಸಿದೆ.

ADVERTISEMENT

ಅಮೆರಿಕದ ಸೈಬರ್‌ ವಿಭಾಗದ ಅಧಿಕಾರಿಗಳ ಜೊತೆಗೆ ಕ್ರಿಸ್ಟೋಫರ್‌ ಅವರು ಸಮಿತಿಯ ಮುಂದೆ ಹಾಜರಾಗಲಿದ್ದಾರೆ ಎಂದು ಹೇಳಿದೆ.

‘ಚೀನಾ ಸರ್ಕಾರ ಪ್ರಾಯೋಜಿತ ಹ್ಯಾಕರ್‌ಗಳು ಸೈಬರ್‌ ದಾಳಿ ನಡೆಸುತ್ತಿದ್ದಾರೆ ಎಂದು ಅಮೆರಿಕದ ಅಧಿಕಾರಿಗಳು ಸುಳ್ಳು ಆರೋಪ ಮಾಡುತ್ತಿದ್ದಾರೆ’ ಎಂದು ಚೀನಾ ಈ ಹಿಂದೆ ಹೇಳಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.