ADVERTISEMENT

ಸೇನೆ ಹಿಂತೆಗೆತ | ಉಭಯ ದೇಶಗಳಿಂದ ಪರಿಣಾಮಕಾರಿ ಕ್ರಮ- ಚೀನಾ ವಕ್ತಾರ

ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಝಾವೊ ಲಿಜಿಯಾನ್‌ ಹೇಳಿಕೆ

ಪಿಟಿಐ
Published 9 ಜುಲೈ 2020, 10:48 IST
Last Updated 9 ಜುಲೈ 2020, 10:48 IST
ಝಾವೊ ಲಿಜಿಯಾನ್‌
ಝಾವೊ ಲಿಜಿಯಾನ್‌   

ಬೀಜಿಂಗ್‌: ವಾಸ್ತವ ಗಡಿ ನಿಯಂತ್ರಣ ರೇಖೆಯಿಂದ (ಎಲ್‌ಎಸಿ) ಹಿಂದೆ ಸರಿಯುವ ನಿಟ್ಟಿನಲ್ಲಿ ಭಾರತ ಮತ್ತು ಚೀನಾದ ಭದ್ರತಾಪಡೆಗಳು ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಂಡಿವೆ ಎಂದು ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಝಾವೊ ಲಿಜಿಯಾನ್‌ ಗುರುವಾರ ಹೇಳಿದ್ದಾರೆ.

‘ಎಲ್‌ಎಸಿಯಿಂದ ತ್ವರಿತವಾಗಿ ಹಿಂದೆ ಸರಿಯಲು ಎರಡೂ ದೇಶಗಳ ಭದ್ರತಾಪಡೆಗಳು ಸಮ್ಮತಿಸಿದ ನಂತರ ಪೂರ್ವ ಲಡಾಖ್‌ನ ಗಡಿಯಲ್ಲಿನ ಉದ್ಭವಿಸಿದ್ದ ಪ್ರಕ್ಷುಬ್ಧ ಸ್ಥಿತಿ ತಿಳಿಯಾಗುತ್ತಿದೆ’ ಎಂದು ಅವರು ಹೇಳಿದ್ದಾರೆ.

‘ಉಭಯ ದೇಶಗಳ ನಡುವೆ ಮಾತುಕತೆ ಮುಂದುವರಿಯುವುದು. ಮಿಲಿಟರಿ ಅಧಿಕಾರಿಗಳ ಮಟ್ಟದಲ್ಲಿ, ರಾಜತಾಂತ್ರಿಕ ಮಾರ್ಗಗಳ ಮೂಲಕ ಈ ಮಾತುಕತೆ ನಡೆಯಲಿದೆ’ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.