ಬೀಜಿಂಗ್: ಭಾರತದ ಜೊತೆಗಿನ ಇತ್ತೀಚಿನ ಸೇನಾ ಸಂಘರ್ಷದ ವೇಳೆ ಪಾಕಿಸ್ತಾನವು ಬಳಕೆ ಮಾಡಿದ್ದ ಚೀನಾ ತಯಾರಿಕೆಯ ಶಸ್ತ್ರಾಸ್ತ್ರಗಳ ಸಾಮರ್ಥ್ಯ ಕುರಿತು ಪ್ರತಿಕ್ರಿಯಿಸಲು ಚೀನಾದ ಸೇನೆ ಗುರುವಾರ ನಿರಾಕರಿಸಿದೆ.
ಚೀನಾದ ರಕ್ಷಣಾ ಸಚಿವಾಲಯದ ವಕ್ತಾರ ಹಿರಿಯ ಕರ್ನಲ್ ಜಾಂಗ್ ಕ್ಸಿಯಾಗಾಂಗ್ ಅವರು, ಸ್ಫೋಟಗೊಳ್ಳದ ‘ಪಿಎಲ್–15ಇ’ ಕ್ಷಿಪಣಿಯನ್ನು ಭಾರತ ವಶಕ್ಕೆ ಪಡೆದಿದೆ ಎಂಬ ವರದಿಗಳನ್ನು ಅಲ್ಲಗಳೆದರು. ‘ಇದು, ಚೀನಾ ತಯಾರಿಕೆಯ ಅತ್ಯುನ್ನತ ರಾಕೆಟ್ ಆಗಿದೆ’ ಎಂದು ಹೇಳಿದರು.
‘ನೀವು ಉಲ್ಲೇಖಿಸುತ್ತಿರುವ ಕ್ಷಿಪಣಿಯು ರಫ್ತು ಪರಿಕರವಾಗಿದೆ. ಇದನ್ನು ಹಲವು ಬಾರಿ ದೇಶದ ಒಳಗೆ ಮತ್ತು ಹೊರಗೆ ಹಲವು ಬಾರಿ ರಕ್ಷಣಾ ಪ್ರದರ್ಶನದಲ್ಲಿ ಪ್ರದರ್ಶಿಸಲಾಗಿತ್ತು’ ಎಂದು ಸುದ್ದಿಗಾರರಿಗೆ ಹೇಳಿದರು.
‘ಚೀನಾವು ಪಾಕಿಸ್ತಾನಕ್ಕೆ ವಾಯು ರಕ್ಷಣಾ ವ್ಯವಸ್ಥೆ ಮತ್ತು ಉಪಗ್ರಹ ನೆರವು ಒದಗಿಸಿದೆ’ ಎಂಬ ಭಾರತದ ಅಧಿಕಾರಿಗಳ ಕುರಿತು ಗಮನಸೆಳೆದಾಗ,ನೇರ ಉತ್ತರ ನೀಡದ ಅವರು ‘ಭಾರತ–ಪಾಕ್ ನೆರೆ ರಾಷ್ಟ್ರಗಳು. ಅದನ್ನು ಬದಲಿಸಲಾಗದು’ ಎಂದರು.
ಉಭಯ ದೇಶಗಳು ಸಂಯಮ ಕಾಯ್ದುಕೊಳ್ಳಲಿವೆ ಮತ್ತು ಉದ್ವಿಗ್ನ ಪರಿಸ್ಥಿತಿಗೆ ಆಸ್ಪದ ನೀಡುವುದಿಲ್ಲ ಎಂದು ಚೀನಾ ಆಶಿಸಲಿದೆ ಎಂದು ಅವರು ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.