ADVERTISEMENT

ಚೀನಾದಿಂದ 50 ಶಸ್ತ್ರಸಜ್ಜಿತ ಡ್ರೋನ್ ಪಾಕಿಸ್ತಾನಕ್ಕೆ ಸರಬರಾಜು: ಚೀನಾ ಮಾಧ್ಯಮ

ಏಜೆನ್ಸೀಸ್
Published 26 ಡಿಸೆಂಬರ್ 2020, 7:34 IST
Last Updated 26 ಡಿಸೆಂಬರ್ 2020, 7:34 IST
ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್
ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್    

ನವದೆಹಲಿ: ಬೀಜಿಂಗ್‌ನಿಂದ ಪಾಕಿಸ್ತಾನಕ್ಕೆ ಸರಬರಾಜು ಮಾಡಲಾದ 50 ವಿಂಗ್ ಲೂಂಗ್ 2 II ಶಸ್ತ್ರಸಜ್ಜಿತ ಡ್ರೋನ್‌ಗಳು ಎತ್ತರದ ಪ್ರದೇಶಗಳಲ್ಲಿ ಭಾರತಕ್ಕೆ ದುಃಸ್ವಪ್ನವಾಗಲಿದೆ. ಏಕೆಂದರೆ, ಹೊಸ ಯುಗದ ಸ್ಟ್ಯಾಂಡ್-ಆಫ್ ಶಸ್ತ್ರಾಸ್ತ್ರಗಳಿಗೆ ತಕ್ಕನಾದ ಮಿಲಿಟರಿ ಸಾಮರ್ಥ್ಯವನ್ನು ಭಾರತ ಹೊಂದಿಲ್ಲ ಎಂದು ಈ ತಿಂಗಳಲ್ಲಿ ಚೀನಾದ ಸುದ್ದಿ ಮಾಧ್ಯಮ ವರದಿ ಮಾಡಿತ್ತು.

ಶತ್ರುಗಳ ರಕ್ಷಣಾ ಮತ್ತು ಸಾಂಪ್ರದಾಯಿಕ ರಕ್ಷಾಕವಚವನ್ನು ನಾಶಮಾಡುವ ಮೂಲಕ ಶಸ್ತ್ರಸಜ್ಜಿತ ಚೀನೀ ಮತ್ತು ಟರ್ಕಿಶ್ ಡ್ರೋನ್‌ಗಳು ಲಿಬಿಯಾ, ಸಿರಿಯಾ ಮತ್ತು ಅಜರ್‌ಬೈಜನ್‌ ಸಂಘರ್ಷಗಳಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿವೆ ಎಂದು ವಾದಿಸಿರುವ ಚೀನಾದ ಮಾಧ್ಯಮಗಳು, ಹೆಚ್ಚಿನ ಸಂಖ್ಯೆಯ ಸಶಸ್ತ್ರ ಡ್ರೋನ್‌ಗಳ ದಾಳಿಯನ್ನು ಎದುರಿಸಲು ಭಾರತಕ್ಕೆ ಸಾಧ್ಯವಾಗುವುದಿಲ್ಲ ಎಂದಿವೆ.

'ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆ ಅಥವಾ ಲಡಾಖ್‌ನ ವಾಸ್ತವ ನಿಯಂತ್ರಣ ರೇಖೆಯಲ್ಲಾಗಿರಲಿ, ವಾಯುಪ್ರದೇಶವನ್ನು ರಾಡಾರ್‌ಗಳು ಬಹಳ ಸೂಕ್ಷ್ಮವಾಗಿ ಮೇಲ್ವಿಚಾರಣೆ ಮಾಡುತ್ತಿವೆ ಮತ್ತು ಎದುರಾಳಿಗಳೊಂದಿಗೆ ಚುರುಕಾಗಿ ಹೋರಾಡುತ್ತಿವೆ. ಒಂದು ವೇಳೆ ಶಸ್ತ್ರಸಜ್ಜಿತ ಡ್ರೋನ್‌ಗಳು ಈ ರೇಖೆಗಳನ್ನು ದಾಟಿದರೆ ಗುಂಡು ಹಾರಿಸಿ ಹೊಡೆದುರುಳಿಸಲಾಗುತ್ತದೆ' ಎಂದು ವಾಯು ಸೇನೆಯ ಮಾಜಿ ಮುಖ್ಯಸ್ಥರು ತಿಳಿಸಿದರು.

ADVERTISEMENT

ಚೀನಾವು ಪಾಕಿಸ್ತಾನಕ್ಕೆ ಶಸ್ತ್ರಸಜ್ಜಿತ ಡ್ರೋನ್‌ಗಳನ್ನು ಸರಬರಾಜು ಮಾಡುವುದರಿಂದ ಭಾರತವು ಶಸ್ತ್ರಸಜ್ಜಿತ ಡ್ರೋನ್‌ಗಳನ್ನು ಮತ್ತು ಡ್ರೋನ್ ವಿರೋಧಿ ವ್ಯವಸ್ಥೆಯನ್ನು ಹೊಂದಲು ವೇದಿಕೆ ಮಾಡಿಕೊಟ್ಟಂತಾಗುತ್ತದೆ. ಏಕೆಂದರೆ ಎಲ್‌ಒಸಿ ಅಥವಾ ಎಲ್‌ಎಸಿಯನ್ನು ದಾಟದೆಯೇ ಗಾಳಿಯಲ್ಲಿ ಶಸ್ತ್ರಾಸ್ತ್ರಗಳನ್ನು ಉಡಾಯಿಸಲು ಮಾನವರಹಿತ ವೈಮಾನಿಕ ವಾಹನಗಳನ್ನು ಬಳಸಬಹುದು.

ಇಸ್ರೇಲ್ ಶಸ್ತ್ರಾಸ್ತ್ರೀಕರಣದ ಹೆರಾನ್ ಡ್ರೋನ್‌ನ ನವೀಕರಣವು ಸಮಯ ತೆಗೆದುಕೊಳ್ಳಲಿದ್ದು, ಸದ್ಯದ ಮಟ್ಟಿಗೆ ಭಾರತದ ಬಳಿಯಾವುದೇ ಸಶಸ್ತ್ರ ಡ್ರೋನ್ ವ್ಯವಸ್ಥೆ ಇಲ್ಲ ಮತ್ತು ಭಾರತೀಯ ನೌಕಾಪಡೆಯು ಸ್ನೇಹಿತ ಅಥವಾ ವೈರಿಯನ್ನು ಗುರುತಿಸುವಿಕೆಯಲ್ಲಿ ಕಡಲ ಪ್ರಭಾವ ವಲಯದ ಜಾಗೃತಿಗಾಗಿ ಅಮೆರಿಕದ ಎರಡು ಪ್ರಿಡೇಟರ್‌ಗಳನ್ನು ಗುತ್ತಿಗೆಗೆ ಪಡೆದುಕೊಂಡಿದೆ.

2015ರಲ್ಲಿ ಇಂತಹ ಅಗತ್ಯವನ್ನು ಒಪ್ಪಿಕೊಂಡ ಬಳಿಕ 2018ರಲ್ಲಿ ಅಂತಹ 61 ವ್ಯವಸ್ಥೆಗಳಿಗೆ ಟೆಂಡರ್ ನೀಡಲಾಗಿದ್ದ ಕ್ಲೋಸ್ ಇನ್ ಶಸ್ತ್ರಾಸ್ತ್ರ ವ್ಯವಸ್ಥೆಯು (ಸಿಐಡಬ್ಲ್ಯುಎಸ್) ಇನ್ನೂ ಕ್ಷೇತ್ರ ಪ್ರಾಯೋಗಿಕ ಹಂತದಲ್ಲಿದೆ ಮತ್ತು ರಷ್ಯಾದ ಎಸ್- 400 ವ್ಯವಸ್ಥೆಯು ಮುಂದಿನ ವರ್ಷ ಲಭ್ಯವಾಗಲಿದೆ. ರಕ್ಷಣಾ ಕ್ಷೇತ್ರದ ಪಿಎಸ್‌ಯು ಬಿಇಎಲ್ ಡ್ರೋನ್ ವಿರೋಧಿ ರಾಡಾರ್ ಆಧಾರಿತ ವ್ಯವಸ್ಥೆಯನ್ನು ತಂದಿದೆ, ಆದರೆ ಅದನ್ನಿನ್ನೂ ಬಳಕೆದಾರರು ಮಾನ್ಯ ಮಾಡಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.