ADVERTISEMENT

ಜಾಗತಿಕ ಅಣು ದುರಂತ ತಡೆದ ಮೋದಿ: ಸಿಐಎ ಮುಖ್ಯಸ್ಥ ಪ್ರಶಂಸೆ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2022, 15:56 IST
Last Updated 19 ಡಿಸೆಂಬರ್ 2022, 15:56 IST
ನರೇಂದ್ರ ಮೋದಿ
ನರೇಂದ್ರ ಮೋದಿ   

ವಾಷಿಂಗ್ಟನ್‌: ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಉಕ್ರೇನ್‌ ಯುದ್ಧದಲ್ಲಿಅಣ್ವಸ್ತ್ರ ಬಳಕೆ ಸಾಧ್ಯತೆ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದು ರಷ್ಯಾದ ಮೇಲೆ ಪ್ರಭಾವ ಬೀರಿದೆ. ಇದರಿಂದ ಜಾಗತಿಕ ಅಣು ಸಂಘರ್ಷದ ದುರಂತ ತಪ್ಪಿದೆ ಎಂದು ಅಮೆರಿಕದಕೇಂದ್ರ ಗುಪ್ತಚರ ಏಜೆನ್ಸಿ (ಸಿಐಎ) ಮುಖ್ಯಸ್ಥ ವಿಲಿಯಂ ಬರ್ನ್ಸ್‌ ಪ್ರಶಂಸಿಸಿದ್ದಾರೆ.

ಭಾರತದ ಪ್ರಧಾನಿ ಮೋದಿ ಅವರ ಜತೆಗೆ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್‌ ಕೂಡ ಅಣ್ವಸ್ತ್ರಗಳ ಬಳಕೆಯ ಬಗ್ಗೆ ತಮ್ಮ ಕಳವಳ ವ್ಯಕ್ತಪಡಿಸಿದ್ದು ತುಂಬಾ ಉಪಯುಕ್ತವಾಯಿತು. ಅದು ರಷ್ಯನ್ನರ ಮೇಲೆ ಪರಿಣಾಮ ಬೀರಿರುವುದಾಗಿ ಭಾವಿಸಿರುವೆ ಎಂದುಬರ್ನ್ಸ್‌ ಅವರುಅಮೆರಿಕದ ಸಾರ್ವಜನಿಕ ಪ್ರಸಾರ ಸೇವೆಗೆ ತಿಳಿಸಿದರು.

‘ನನ್ನ ಪ್ರಕಾರ, ಅತ್ಯಂತ ಅಪಾಯಕಾರಿ ಅಣ್ವಸ್ತ್ರ ಬಳಕೆ ಬೆದರಿಕೆ ಸೃಷಿಸಿದವರು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಅವರ ಸುತ್ತಲಿನವರು.ಅಣ್ವಸ್ತ್ರ ಬೆದರಿಕೆಯಗಂಭೀರ ಅಪಾಯಗಳೇನೆಂಬುದನ್ನು ಅಮೆರಿಕವು ರಷ್ಯನ್ನರಿಗೆ ಸ್ಪಷ್ಟವಾಗಿ ಮನದಟ್ಟು ಮಾಡಿಸಿದೆ.ಯುದ್ಧತಂತ್ರದ ಅಣ್ವಸ್ತ್ರಗಳನ್ನು ಬಳಸುವ ಯೋಜನೆಗಳ ಬಗ್ಗೆ ಇಂದು ನಮಗೆ ಯಾವುದೇ ಸ್ಪಷ್ಟ ಪುರಾವೆಗಳು ಕಾಣುತ್ತಿಲ್ಲ’ ಎಂದು ಅವರು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.