ADVERTISEMENT

ಕಾಂಗೊದಲ್ಲಿ ಭೂಕುಸಿತ: 200 ಮಂದಿ ಸಾವು

ಏಜೆನ್ಸೀಸ್
Published 31 ಜನವರಿ 2026, 16:02 IST
Last Updated 31 ಜನವರಿ 2026, 16:02 IST
ಗಣಿಗಾರಿಕೆಗಾಗಿ ಕೊರೆದಿರುವ ಸುರಂಗ– ಪ್ರಾತಿನಿಧಿಕ ಚಿತ್ರ
ಗಣಿಗಾರಿಕೆಗಾಗಿ ಕೊರೆದಿರುವ ಸುರಂಗ– ಪ್ರಾತಿನಿಧಿಕ ಚಿತ್ರ   

ಗೋಮಾ (ಕಾಂಗೊ): ಕಾಂಗೊದ ಕೊಲ್ಟನ್‌ ಗಣಿಗಾರಿಕೆ ಪ್ರದೇಶದಲ್ಲಿ ಭೂಕಂಪ ಸಂಭವಿಸಿ, ಹಲವು ಗಣಿಗಳು ಕುಸಿದು 200 ಮಂದಿ ಸಾವಿಗೀಡಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು. 

ಎಂ23 ಬಂಡುಕೋರರ ನಿಯಂತ್ರಣದಲ್ಲಿರುವ ರುಬಾಯಾದಲ್ಲಿ ಬುಧವಾರ ಅವಘಡ ಸಂಭವಿಸಿದೆ. ‘ಅತಿಯಾದ ಮಳೆಯಿಂದ ಭೂಕುಸಿತ ಸಂಭವಿಸಿದೆ’ ಎಂದು ಬಂಡುಕೋರರ ವಕ್ತಾರ ಲುಮುಂಬಾ ಕಾಂಬೆರೆ ಮುಯಿಷಾ ಅವರು ತಿಳಿಸಿದರು. 

‘ಇಲ್ಲಿಯವರೆಗೆ 200 ಮಂದಿ ಮೃತಪಟ್ಟಿದ್ದಾರೆ. ಮೃತರ ಪೈಕಿ ಇನ್ನೂ ಹಲವರ ಶವಗಳನ್ನು ಹೊರತೆಗೆಯಲಾಗಿಲ್ಲ. ಗಾಯಾಳುಗಳಿಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಸ್ಥಳದಲ್ಲಿ ಗಣಿಗಾರಿಕೆಯನ್ನು ಸ್ಥಗಿತಗೊಳಿಸಲಾಗಿದ್ದು, ಅಲ್ಲಿ ಗುಡಿಸಲಿನಲ್ಲಿ ವಾಸಿಸುವ ಜನರನ್ನು ಸ್ಥಳಾಂತರಿಸಲು ಆದೇಶಿಸಲಾಗಿದೆ’ ಎಂದರು.

ADVERTISEMENT

‘ಕೈಗಳಿಂದಲೇ ಸುರಂಗಗಳನ್ನು ಕೊರೆಯಲಾಗಿದ್ದು, ಅವುಗಳ ನಿರ್ಮಾಣ ಕಳಪೆಯಾಗಿದೆ. ಸುರಂಗಗಳನ್ನು ನಿರ್ವಹಣೆ ಮಾಡಲಾಗಿಲ್ಲ. ಯಾವುದೇ ಸುರಕ್ಷತಾ ಕ್ರಮಗಳನ್ನು ಅನುಸರಿಸದೆಯೇ ಜನರು ಎಲ್ಲೆಂದರಲ್ಲಿ ಅಗೆಯುತ್ತಾರೆ. ಗಣಿಗಾರಿಕೆಗಾಗಿ ಕೊರೆದ ಒಂದೇ ಸುರಂಗದಲ್ಲಿ ಸುಮಾರು 500ರಷ್ಟು ಕಾರ್ಮಿಕರೂ ಇರುತ್ತಾರೆ’ ಎಂದು ಈ ಗಣಿಗಾರಿಕೆಯಲ್ಲಿ ಹಿಂದೆ ಕೆಲಸ ಮಾಡಿದ ಅನುಭವ ಹೊಂದಿರುವ ಕ್ಲೊವಿಸ್‌ ಮಾಫೇರ್‌ ಹೇಳಿದರು.  

‘ಎಲ್ಲಾ ಸುರಂಗಗಳೂ ಸಮಾನಾಂತರವಾಗಿರುವುದರಿಂದ ಒಂದು ಕುಸಿದರೂ ಅದು ಉಳಿದ ಸುರಂಗಗಳ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ದುರಂತ ಸಂಭವಿಸಿದೆ’ ಎಂದೂ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.