ADVERTISEMENT

ಮದ್ಯಪಾನ ಮಾಡಿ ವಾಹನ ಚಾಲನೆಗೆ ತಡೆ: ಹೊಸ ತಂತ್ರಜ್ಞಾನ ಅಳವಡಿಕೆಗೆ ಅಮೆರಿಕ ನಿರ್ಧಾರ

ಏಜೆನ್ಸೀಸ್
Published 9 ನವೆಂಬರ್ 2021, 7:40 IST
Last Updated 9 ನವೆಂಬರ್ 2021, 7:40 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ವಾಷಿಂಗ್ಟನ್‌: ಮದ್ಯಪಾನ ಮಾಡಿ ವಾಹನ ಚಲಾಯಿಸುವುದನ್ನು ತಪ್ಪಿಸುವುದಕ್ಕಾಗಿ ನೂತನ ತಂತ್ರಜ್ಞಾನ ಆವಿಷ್ಕರಿಸುವಂತೆ ಅಮೆರಿಕ ಸರ್ಕಾರ ವಾಹನ ತಯಾರಕಾ ಕಂಪನಿಗಳಿಗೆ ಕೇಳಿದ್ದು,ಈ ಮೂಲಕ ಆಟೊಮೊಬೈಲ್‌ ಉದ್ಯಮಿಗಳಿಗೆ ಹೊಸ ಅವಕಾಶವನ್ನು ಸೃಷ್ಟಿಸಿದೆ.

ರಸ್ತೆ ಅಪಘಾತಗಳು ಹೆಚ್ಚುತ್ತಿರುವುದರಿಂದ ‘ವಾಹನ ಸುರಕ್ಷತೆ’ಯನ್ನು ಸುಧಾರಿಸುವ ಗುರಿ ಹೊಂದಿರುವ ಜೋ ಬೈಡನ್ ಸರ್ಕಾರ ₹73,87,730 ಕೋಟಿ (1ಟ್ರಿಲಿಯನ್ ಡಾಲರ್‌) ಮೊತ್ತದ ಮೂಲಸೌಕರ್ಯ ಪ್ಯಾಕೇಜ್‌ಗೆ ಶೀಘ್ರವೇ ಸಹಿ ಹಾಕುವ ಸಾಧ್ಯತೆ ಇದ್ದು, ಇದರಲ್ಲಿ ನೂತನ ತಂತ್ರಜ್ಞಾನ ಆವಿಷ್ಕಾರಕ್ಕೆ ಉತ್ತೇಜನ ನೀಡುವುದೂ ಸೇರಿದೆ.

ಸಾರಿಗೆ ಇಲಾಖೆಯು ಹೊಸ ತಂತ್ರಜ್ಞಾನಗಳನ್ನುಪರಿಶೀಲಿಸಿ, ಯಾವುದು ಉತ್ತಮವಾಗಿದೆ ಎಂಬುದನ್ನು ವಿಶ್ಲೇಷಣೆಗೊಳಪಡಿಸಿದ ನಂತರ, ಅದನ್ನು ವಾಹನಗಳಿಗೆ ಅಳವಡಿಸಲು ವಾಹನ ತಯಾರಕರಿಗೆ ಸಮಯ ನೀಡಲಾಗುತ್ತದೆ.ಇದಾದ ಬಳಿಕ ಅಂದರೆ 2026ರ ಆರಂಭದ ವೇಳೆಗೆ ಕುಡಿದು ಚಾಲನೆ ಮಾಡುವುದನ್ನು ತಡೆಯುವ ಹೊಸ ತಂತ್ರಜ್ಞಾನವನ್ನು ಎಲ್ಲಾ ವಾಹನಗಳಲ್ಲಿ ಅಳವಡಿಸಲಾಗುತ್ತದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.