ADVERTISEMENT

World Covid-19 Update: ವಿಶ್ವದಾದ್ಯಂತ 4 ಲಕ್ಷ ದಾಟಿದ ಸಾವಿನ ಸಂಖ್ಯೆ

ಏಜೆನ್ಸೀಸ್
Published 7 ಜೂನ್ 2020, 17:37 IST
Last Updated 7 ಜೂನ್ 2020, 17:37 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ವಾಷಿಂಗ್ಟನ್: ಕೊರೊನಾ ವೈರಸ್‌ ಸೋಂಕಿನಿಂದಾಗಿ ವಿಶ್ವದಾದ್ಯಂತ ಸಾವಿಗೀಡಾದವರ ಸಂಖ್ಯೆ ಭಾನುವಾರ ರಾತ್ರಿ ಹೊತ್ತಿಗೆ
4,00792 ಮಂದಿ ಸಾವಿಗೀಡಾಗಿದ್ದಾರೆ. ಅಮೆರಿಕದಲ್ಲಿ ಇಲ್ಲಿಯವರೆಗೆ 1,09928 ಮಂದಿ ಸಾವಿಗೀಡಾಗಿದ್ದಾರೆ, ಬ್ರಿಟನ್‌ನಲ್ಲಿ 40, 625 ಮಂದಿ, ಬ್ರೆಜಿಲ್‌ನಲ್ಲಿ 35,930 ಮಂದಿ ಸಾವಿಗೀಡಾಗಿದ್ದಾರೆ.

ಜಾನ್ಸ್ ಹಾಪ್ಕಿನ್ಸ್ ಕೊರೊನಾ ವೈರಸ್ ರಿಸೋರ್ಸ್‌ ಸೆಂಟರ್ ಮಾಹಿತಿ ಪ್ರಕಾರ,ಜಗತ್ತಿನಾದ್ಯಂತ ಸೋಂಕಿತರ ಸಂಖ್ಯೆ 69.44 ಲಕ್ಷ ಆಗಿದೆ. ಅಮೆರಿಕದಲ್ಲಿ 1925503,ಬ್ರೆಜಿಲ್ 672846 ,ರಷ್ಯಾ 467073 ಮಂದಿಗೆ ಸೋಂಕು ದೃಢಪಟ್ಟಿದೆ.

ಮೆಕ್ಸಿಕೊದಲ್ಲಿ ಸಾವಿನ ಸಂಖ್ಯೆ ಏರಿಕೆ: ಮೆಕ್ಸಿಕೊದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 3,600 ಹೊಸ ಪ್ರಕರಣಗಳು ದೃಢಪಟ್ಟಿವೆ. ಇದರೊಂದಿಗೆ ಅಲ್ಲಿನ ಸೋಂಕಿತರ ಸಂಖ್ಯೆ 113,619ಕ್ಕೆ ಏರಿಕೆಯಾಗಿದೆ. ಈವರೆಗೆ 13,511 ಜನ ಮೃತಪಟ್ಟಿದ್ದಾರೆ. ಇನ್ನೂ 1,189 ಮಂದಿಯ ಸಾವು ಯಾವ ಕಾರಣದಿಂದ ಸಂಭವಿಸಿದೆ ಎಂಬುದು ಇನ್ನಷ್ಟೇ ತಿಳಿದು ಬರಬೇಕಿದೆ ಎಂದು ಅಲ್ಲಿನ ಆರೋಗ್ಯ ಸಚಿವಾಲಯ ತಿಳಿಸಿದೆ. ಸದ್ಯ ಮೆಕ್ಸಿಕೊದಲ್ಲಿ 19,278 ಸಕ್ರಿಯ ಪ್ರಕರಣಗಳಿವೆ.

ADVERTISEMENT

ಅಮೆರಿಕದಲ್ಲಿ ಸೋಂಕಿತರ ಸಂಖ್ಯೆ 19.20 ಲಕ್ಷ ದಾಟಿದ್ದು, 109,802 ಮಂದಿ ಈವರೆಗೆ ಮೃತಪಟ್ಟಿದ್ದಾರೆ. ಬ್ರೆಜಿಲ್‌ನಲ್ಲಿ ಈವರೆಗೆ 6.72 ಲಕ್ಷಕ್ಕೂ ಹೆಚ್ಚು ಮಂದಿಗೆ ಸೋಂಕು ತಗುಲಿದ್ದು, 35,930 ಜನ ಸಾವಿಗೀಡಾಗಿದ್ದಾರೆ. ರಷ್ಯಾದಲ್ಲಿ 4.58 ಲಕ್ಷ ಜನರಿಗೆ ಸೋಂಕು ತಗುಲಿ 5,717 ಜನ ಮೃತಪಟ್ಟಿದ್ದಾರೆ. ರಷ್ಯಾದಲ್ಲಿ ಸಾವಿನ ಸಂಖ್ಯೆಯಲ್ಲಿ ಶನಿವಾರ ದಿಡೀರ್ ಏರಿಕೆ ಕಂಡುಬಂದಿತ್ತು.

ಪಾಕಿಸ್ತಾನದಲ್ಲಿ ಸೋಂಕಿತರ ಸಂಖ್ಯೆ 93,983 ತಲುಪಿದ್ದು,ಈವರೆಗೆ1,935 ಸಾವು ಸಂಭವಿಸಿದೆ.

ಕೊರೊನಾದಿಂದಾಗಿ ಈವರೆಗೆ ಬ್ರೆಜಿಲ್‌ನಲ್ಲಿ 35,930, ಬ್ರಿಟನ್‌ನಲ್ಲಿ 40,548, ಸ್ಪೇನ್‌ನಲ್ಲಿ 27,135, ಇಟಲಿಯಲ್ಲಿ 33,846, ಫ್ರಾನ್ಸ್‌ನಲ್ಲಿ 29,145 ಹಾಗೂ ಜರ್ಮನಿಯಲ್ಲಿ 8,673 ಮಂದಿ ಅಸುನೀಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.