ADVERTISEMENT

ಅಮೆರಿಕದಲ್ಲಿ ಕೋವಿಡ್‌–19: ಒಂದೇ ದಿನ 865 ಜನ ಸಾವು, 1.80 ಲಕ್ಷ ಸೋಂಕು ಪೀಡಿತರು

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2020, 3:22 IST
Last Updated 1 ಏಪ್ರಿಲ್ 2020, 3:22 IST
   

ವಾಷಿಂಗ್ಟನ್‌: ಅಮೆರಿಕದಲ್ಲಿ ಒಂದೇ ದಿನ ಕೊರೊನಾ ವೈರಸ್‌ ಸೋಂಕಿಗೆ 865 ಜನರು ಬಲಿಯಾಗಿದ್ದು ಸೋಂಕು ಪೀಡಿತರ ಸಂಖ್ಯೆ 188,172ಕ್ಕೆ ಏರಿಕೆಯಾಗಿದೆ.

ಸೋಂಕು ಪೀಡಿತರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಅಮೆರಿಕದಲ್ಲಿ ಆತಂಕ ಮನೆ ಮಾಡಿದ್ದು, ಸೋಂಕು ಮತ್ತಷ್ಟು ಹರಡದಂತೆ ತಡೆಯಲು ಅಗತ್ಯಕ್ರಮಗಳನ್ನು ಕೈಗೊಳ್ಳಲು ಟ್ರಂಪ್‌ ಸರ್ಕಾರ ಅಧಿಕಾರಿಗಳಿಗೆ ಸೂಚಿಸಿದೆ.

ಅಮೆರಿಕದಲ್ಲಿ ಕೋವಿಡ್‌–19ಗೆ ಬಲಿಯಾದವರ ಸಂಖ್ಯೆ ಚೀನಾ ದೇಶಕ್ಕಿಂತಲೂ ಹೆಚ್ಚಾಗಿದೆ. ಚೀನಾದಲ್ಲಿ ಒಟ್ಟು 3305 ಜನ ಮೃತಪಟ್ಟಿದ್ದರೆ, ಅಮೆರಿಕದಲ್ಲಿ ಮೃತರ ಸಂಖ್ಯೆ 3873ಕ್ಕೆ ಏರಿಕೆಯಾಗಿದೆ.

ADVERTISEMENT

ಕಳೆದ ಎರಡು ದಿನಗಳಲ್ಲಿ ಅಮೆರಿಕದಲ್ಲಿ 1500 ಜನರು ಮೃತಪಟ್ಟಿದ್ದಾರೆ.

ಸೋಂಕು ಪೀಡಿತರ ಸಂಖ್ಯೆಯು, ಇಟಿಲಿ, ಸ್ಪೇನ್‌, ಜರ್ಮನಿ ದೇಶಗಳಿಗಿಂತಲೂ ಹೆಚ್ಚಾಗಿರುವುದು ಅಮೆರಿಕ ಸರ್ಕಾರಕ್ಕೆ ಆತಂಕ ಮೂಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.