ADVERTISEMENT

ಥಾಯ್ಲೆಂಡ್‌ ಪ್ರಧಾನಿ ಅಮಾನತು: ಸಾಂವಿಧಾನಿಕ ನ್ಯಾಯಾಲಯದ ತೀರ್ಪು

ಏಜೆನ್ಸೀಸ್
Published 24 ಆಗಸ್ಟ್ 2022, 13:13 IST
Last Updated 24 ಆಗಸ್ಟ್ 2022, 13:13 IST
ಪ್ರಯುತ್‌ ಚನ್‌–ಒ–ಚಾ
ಪ್ರಯುತ್‌ ಚನ್‌–ಒ–ಚಾ   

ಬ್ಯಾಂಕಾಕ್‌ (ಎಎಫ್‌ಪಿ): ಥಾಯ್ಲೆಂಡ್‌ನ ಸಾಂವಿಧಾನಿಕ ನ್ಯಾಯಾಲಯವು ಪ್ರಯುತ್‌ ಚನ್‌–ಒ–ಚಾ ಅವರನ್ನುಪ್ರಧಾನ ಮಂತ್ರಿ ಹುದ್ದೆಯಿಂದ ಬುಧವಾರ ಅಮಾನತು ಮಾಡಿದೆ. ಸಾರ್ವತ್ರಿಕ ಚುನಾವಣೆ ಸಮೀಪಿಸುತ್ತಿರುವ ಹೊತ್ತಿನಲ್ಲೇ ಈ ತೀರ್ಮಾನ ಕೈಗೊಂಡಿದೆ.

ಥಾಯ್ಲೆಂಡ್‌ ಪ್ರಧಾನಿ ಹುದ್ದೆಗೇರುವವರ ಕಾರ್ಯಾವಧಿಯು ಎಂಟು ವರ್ಷದ್ದಾಗಿರಲಿದೆ. ಪ್ರಯುತ್‌ ಈಗಾಗಲೇ ಈ ಅವಧಿ ಪೂರ್ಣಗೊಳಿಸಿದ್ದಾರೆ. ಹೀಗಾಗಿ ಅವರನ್ನು ಹುದ್ದೆಯಿಂದ ಕೆಳಗಿಳಿಸಬೇಕೆಂದು ಕೋರಿ ವಿರೋಧ ಪಕ್ಷಗಳು ಅರ್ಜಿ ಸಲ್ಲಿಸಿದ್ದವು. ನ್ಯಾಯಾಲಯವು ಬುಧವಾರ ಇದರ ವಿಚಾರಣೆ ನಡೆಸಿತು.

‘ಅರ್ಜಿದಾರರು ಸಲ್ಲಿಸಿದ್ದ ದಾಖಲೆಗಳನ್ನು ಪರಿಶೀಲಿಸಿದ ಬಳಿಕ ಆಗಸ್ಟ್‌ 24ರಿಂದಲೇ ಜಾರಿಯಾಗುವಂತೆ ಪ್ರಯುತ್‌ ಅವರನ್ನು ಪ್ರಧಾನಿ ಹುದ್ದೆಯಿಂದ ಅಮಾನತು ಮಾಡುವ ನಿರ್ಣಯ ಕೈಗೊಳ್ಳಲಾಗಿದೆ. ಅಂತಿಮ ತೀರ್ಪು ಪ್ರಕಟವಾಗುವವರೆಗೂ ಅವರು ಅಮಾನತಿನಲ್ಲಿರಲಿದ್ದಾರೆ’ ಎಂದು ನ್ಯಾಯಾಲಯ ಹೇಳಿದೆ.

ADVERTISEMENT

ಪ್ರಕರಣದ ಸಂಬಂಧ ಪ್ರತಿಕ್ರಿಯೆ ನೀಡಲು ಪ್ರಯುತ್‌ ಅವರಿಗೆನ್ಯಾಯಾಲಯವು 15 ದಿನಗಳ ಕಾಲಾವಕಾಶ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.