ADVERTISEMENT

ಜರ್ಮನಿ: ಕೋವಿಡ್ ಹೆಚ್ಚಳ; ದೊಡ್ಡ ಸಮಾರಂಭ ರದ್ದುಗೊಳಿಸಲು ಕರೆ

ಏಜೆನ್ಸೀಸ್
Published 12 ನವೆಂಬರ್ 2021, 15:51 IST
Last Updated 12 ನವೆಂಬರ್ 2021, 15:51 IST
ಪ್ರಾತಿನಿಧಿಕ ಚಿತ್ರ 
ಪ್ರಾತಿನಿಧಿಕ ಚಿತ್ರ    

ಬರ್ಲಿನ್: ದೇಶದಲ್ಲಿ ದಿನೇದಿನೇ ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಜನರು ದೊಡ್ಡ ದೊಡ್ಡ ಕಾರ್ಯಕ್ರಮ ಅಥವಾ ಬೃಹತ್ ಪ್ರಮಾಣದಲ್ಲಿ ಜನರು ಒಗ್ಗೂಡುವಂಥ ಸಮಾರಂಭಗಳನ್ನು ರದ್ದುಪಡಿಸಬೇಕೆಂದು ಜರ್ಮನಿಯ ರೋಗ ನಿಯಂತ್ರಣ ಕೇಂದ್ರವು ಕರೆ ನೀಡಿದೆ.

ದೇಶದಲ್ಲಿ ಇದೇ ಮೊದಲ ಬಾರಿಗೆ ಗುರುವಾರ ದಾಖಲೆಯ ಮಟ್ಟದಲ್ಲಿ ಅಂದರೆ ದೈನಂದಿನ ಪ್ರಕರಣಗಳ ಸಂಖ್ಯೆ 50 ಸಾವಿರಕ್ಕೆ ತಲುಪಿದ್ದು, ಹೊಸದಾಗಿ 48,640 ಪ್ರಕರಣಗಳು ವರದಿಯಾಗಿವೆ. ಅಲ್ಲದೇ, ಪ್ರತಿ ಲಕ್ಷ ಜನಸಂಖ್ಯೆಗೆ ಸೋಂಕಿನ ಪ್ರಮಾಣವು 249.1ರಿಂದ 263.7ಕ್ಕೆ ಏರಿದೆ ಎಂದು ಅಲ್ಲಿನ ರಾಬರ್ಟ್ ಕೋಚ್ ಇನ್‌ಸ್ಟಿಟ್ಯೂಟ್ ಶುಕ್ರವಾರ ತಿಳಿಸಿದೆ.

‘ಸಾಧ್ಯವಾದರೆ ದೊಡ್ಡ ಸಮಾರಂಭಗಳನ್ನು ರದ್ದುಗೊಳಿಸಬೇಕು. ಅಂತೆಯೇ ಅಗತ್ಯವಿಲ್ಲದ ಕಡೆ ಜನರು ದೈಹಿಕ ಅಂತರ ಕಾಪಾಡಿಕೊಳ್ಳುವುದು ಅತ್ಯಗತ್ಯ’ ಎಂದು ಇನ್‌ಸ್ಟಿಟ್ಯೂಟ್ ತುರ್ತು ಕರೆ ನೀಡಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.