ADVERTISEMENT

ಕೊರೊನಾದಿಂದ ಇನ್ನೂ ಮುಕ್ತವಾಗಿಲ್ಲ: ವಿಶ್ವಸಂಸ್ಥೆ

ಪ್ರತಿ ನಿತ್ಯ 15 ಲಕ್ಷ ಮಂದಿಗೆ ಸೋಂಕು

ಪಿಟಿಐ
Published 9 ಏಪ್ರಿಲ್ 2022, 13:24 IST
Last Updated 9 ಏಪ್ರಿಲ್ 2022, 13:24 IST
ಆಂಟೊನಿಯೊ ಗುಟೆರಸ್
ಆಂಟೊನಿಯೊ ಗುಟೆರಸ್   

ವಿಶ್ವಸಂಸ್ಥೆ: ಪ್ರತಿ ನಾಲ್ಕು ತಿಂಗಳಿಗೊಮ್ಮೆ ಕೊರೊನಾ ವೈರಸ್‌ನ ಹೊಸ ಪ್ರಭೇದಗಳು ಹುಟ್ಟಿಕೊಳ್ಳುತ್ತಿವೆ. ಇದರಿಂದಾಗಿ ನಾವು ಸಾಂಕ್ರಾಮಿಕ ಕೊರೊನಾ ವೈರಸ್‌ನಿಂದ ಇನ್ನೂ ಮುಕ್ತವಾಗಿಲ್ಲ ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೊನಿಯೊ ಗುಟೆರಸ್ ಹೇಳಿದರು.

ಏಷ್ಯಾದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಪ್ರತಿ ನಿತ್ಯ 15 ಲಕ್ಷ ಮಂದಿ ಹೊಸದಾಗಿ ಸೋಂಕಿಗೆ ತುತ್ತಾಗುತ್ತಿದ್ದಾರೆ. ಏಷ್ಯಾದಲ್ಲಿ ಬಹುವೇಗವಾಗಿ ಸೋಂಕು ವ್ಯಾಪಿಸುತ್ತಿದೆ. ಯುರೋಪ್‌ನಾದ್ಯಂತ ವೈರಸ್‌ನ ಹೊಸ ಅಲೆ ಹೆಚ್ಚಾಗಿದೆ ಎಂದು ತಿಳಿಸಿದರು.

ಶ್ರೀಮಂತ ದೇಶಗಳು ಈಗಾಗಲೇ ತನ್ನ ನಾಗರಿಕರಿಗೆ 2ನೇ ಬೂಸ್ಟರ್ ಡೋಸ್ ನೀಡಲು ಸಿದ್ಧತೆ ನಡೆಸುತ್ತಿವೆ. ಆದರೆ, ವಿಶ್ವದ ಪ್ರತಿ ಮೂವರಲ್ಲಿ ಒಬ್ಬರು ಇನ್ನೂ ಲಸಿಕೆ ಪಡೆದಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಅವರು, ಪ್ರತಿಯೊಂದು ದೇಶವು ತನ್ನ ನಾಗರಿಕರಿಗೆ ಶೇ 70ರಷ್ಟು ಲಸಿಕೆ ನೀಡಬೇಕು ಎಂಬ ಗುರಿಯಿಂದ ನಾವು ಇನ್ನೂ ದೂರ ಉಳಿದಿದ್ದೇವೆ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.