ADVERTISEMENT

ಕೊರೊನಾ ಮುಕ್ತವಾಗಿದ್ದ ಸಿಂಗಪುರದಲ್ಲಿ ಮತ್ತೆ 92 ಹೊಸ ಕೋವಿಡ್‌ ಪ್ರಕರಣಗಳು ಪತ್ತೆ

ಪಿಟಿಐ
Published 19 ಜುಲೈ 2021, 6:54 IST
Last Updated 19 ಜುಲೈ 2021, 6:54 IST
ಸಿಂಗಪುರದ ಮಾರುಕಟ್ಟೆಯೊಂದರ ದೃಶ್ಯ(ಸಂಗ್ರಹ ಚಿತ್ರ)
ಸಿಂಗಪುರದ ಮಾರುಕಟ್ಟೆಯೊಂದರ ದೃಶ್ಯ(ಸಂಗ್ರಹ ಚಿತ್ರ)   

ಸಿಂಗಪುರ: ಕೆಲವು ತಿಂಗಳುಗಳಿಂದ ’ಕೊರೊನಾ ಸೋಂಕು ಮುಕ್ತ’ವಾಗಿದ್ದ ಸಿಂಗಪುರದಲ್ಲಿ ಮಾರುಕಟ್ಟೆ, ಮನರಂಜನಾ ಕ್ಲಬ್‌ಗಳನ್ನು ತೆಗೆಯಲು ಅನುಮತಿ ನೀಡಿದ ನಂತರ ಮತ್ತೆ ಕೋವಿಡ್‌ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದ್ದು, ಭಾನುವಾರ 92 ಹೊಸ ಪ್ರಕರಣಗಳು ಪತ್ತೆಯಾಗಿವೆ.

ಆರೋಗ್ಯ ಸಚಿವಾಲಯದ ವರದಿ ಪ್ರಕಾರ ಪತ್ತೆಯಾಗಿರುವ 92 ಹೊಸ ಪ್ರಕರಣಗಳಲ್ಲಿ, 88 ಸ್ಥಳೀಯ ಪ್ರಕರಣಗಳು, ಉಳಿದ ನಾಲ್ಕು ವಿದೇಶಗಳಿಂದ ಬಂದವರಲ್ಲಿ ಕಾಣಿಸಿಕೊಂಡಿರುವ ಸೋಂಕು.

ಸಮುದಾಯದಲ್ಲಿ ಸೋಂಕು ಹರಡುತ್ತಿರುವ ಕಾರಣ, ಹೊಸ ಸೋಂಕಿನ ಪ್ರಕರಣಗಳನ್ನು ಪತ್ತೆ ಮಾಡುವುದಕ್ಕಾಗಿ ಪರೀಕ್ಷೆ ಪ್ರಮಾಣವನ್ನು ಹೆಚ್ಚಿಸಲಾಗುತ್ತಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಸೋಂಕಿನ ಪ್ರಕರಣಗಳು ಹೆಚ್ಚು ವರದಿಯಾಗುವ ಸಾಧ್ಯತೆ ಇದೆ ಎಂದು ಸಚಿವಾಲಯದ ತಿಳಿಸಿದೆ.

ADVERTISEMENT

ಜುಲೈ 10ರವರೆಗೆ ಸ್ಥಳೀಯ ಸೋಂಕಿನ ಪ್ರಕರಣಗಳು ಶೂನ್ಯವಾಗಿತ್ತು. ಆ ವೇಳೆಗೆ ವಿದೇಶದಿಂದ ಬಂದ ಆರು ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಇದರಲ್ಲಿ ಸಿಂಗಪುರಕ್ಕೆ ಬಂದ ಮೂವರಲ್ಲಿ ಸೋಂಕು ಪತ್ತೆಯಾಗಿದ್ದರೆ, ಉಳಿದ ಮೂವರಿಗೆ ಮನೆಯಲ್ಲೇ ಪ್ರತ್ಯೇಕ ವಾಸವಿದ್ದ ಸಂದರ್ಭದಲ್ಲಿ ಸೋಂಕು ಕಾಣಿಸಿಕೊಂಡಿತ್ತು’ ಎಂದು ಆರೋಗ್ಯ ಸಚಿವಾಲಯ ದೃಢಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.