ADVERTISEMENT

Covid-19 World Update| ನಾಲ್ಕೂವರೆ ಕೋಟಿ ದಾಟಿದ ಕೊರೊನಾ ಸೋಂಕು ಪ್ರಕರಣಗಳು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 30 ಅಕ್ಟೋಬರ್ 2020, 16:44 IST
Last Updated 30 ಅಕ್ಟೋಬರ್ 2020, 16:44 IST
ಫ್ರಾನ್ಸ್‌ನ ವಂಡೋಯೆವ್-ಲೆಸ್-ನ್ಯಾನ್ಸಿ ಎಂಬಲ್ಲಿ ನಡೆಯುತ್ತಿದ್ದ ಕೊರೊನಾ ವೈರಸ್‌ ಸೋಂಕು ಪತ್ತೆ ಪರೀಕ್ಷೆ (ಎಎಫ್‌ಪಿ ಚಿತ್ರ)
ಫ್ರಾನ್ಸ್‌ನ ವಂಡೋಯೆವ್-ಲೆಸ್-ನ್ಯಾನ್ಸಿ ಎಂಬಲ್ಲಿ ನಡೆಯುತ್ತಿದ್ದ ಕೊರೊನಾ ವೈರಸ್‌ ಸೋಂಕು ಪತ್ತೆ ಪರೀಕ್ಷೆ (ಎಎಫ್‌ಪಿ ಚಿತ್ರ)   

ನವದೆಹಲಿ: ವಿಶ್ವದಲ್ಲಿ ಕೊರೊನಾ ವೈರಸ್‌ ಸೋಂಕು ಪ್ರಕರಣಗಳ ಸಂಖ್ಯೆ ಅ.30ರ ಹೊತ್ತಿಗೆ ನಾಲ್ಕೂವರೆ ಕೋಟಿ (4,56,04,615) ಮೀರಿದೆ. ಸಾವಿನ ಸಂಖ್ಯೆ 1.18 ಲಕ್ಷ (11,89,610) ದಾಟಿದೆ.

ಆದರೆ, ನಾಲ್ಕೂವರೆ ಕೋಟಿ ಸೋಂಕಿತರ ಪೈಕಿ ಈಗಾಗಲೇ 3,30,88,463 ಮಂದಿ ಗುಣಮುಖರಾಗಿದ್ದಾರೆ. ಹೀಗಾಗಿ ವಿಶ್ವದಲ್ಲಿ ಸಕ್ರಿಯವಾಗಿರುವ ಸೋಂಕು ಪ್ರಕರಣಗಳ ಸಂಖ್ಯೆ 1,13,26,542 ಮಾತ್ರ. ಈ ಪೈಕಿ 1,12,43,905 ಮಂದಿಯ ಪರಿಸ್ಥಿತಿ ಸಾಧಾರಣವಾಗಿದ್ದರೆ, 82,637 ಮಂದಿಯ ಆರೋಗ್ಯ ಸ್ಥಿತಿ ಹದಗೆಟ್ಟಿದೆ.

ಇನ್ನು ವಿಶ್ವದಲ್ಲೇ ಅತಿ ಹೆಚ್ಚು ಸೋಂಕು ಪ್ರಕರಣಗಳನ್ನು ಹೊಂದಿರುವ ಅಮೆರಿಕದಲ್ಲಿ 92,31,014 ಸೋಂಕಿತರಿದ್ದಾರೆ. ಈ ಪೈಕಿ 59,88,200 ಗುಣಮುಖರಾಗಿದ್ದರೆ, 2,34,444 ಮಂದಿ ಮೃತಪಟ್ಟಿದ್ದಾರೆ.

ADVERTISEMENT

ಭಾರತದಲ್ಲಿ 80,94,636 ಸೋಂಕು ಪ್ರಕರಣಗಳಿವೆ. 73,76,961ಮಂದಿ ಗುಣಮುಖರಾಗಿದ್ದಾರೆ. 1,21,211 ಮಂದಿ ಮೃತಪಟ್ಟಿದ್ದಾರೆ.

ಬ್ರೆಜಿಲ್‌ನಲ್ಲಿ 54,99,875 ಸೋಂಕಿತರಿದ್ದಾರೆ. ಈ ಪೈಕಿ 49,54,159 ಗುಣವಾಗಿದ್ದಾರೆ. 1,59,104 ಮಂದಿ ಸೋಂಕಿಗೆ ಪ್ರಾಣ ತೆತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.