ADVERTISEMENT

Covid-19 World Update | 3.10 ಕೋಟಿಗೂ ಹೆಚ್ಚು ಜನ ಗುಣಮುಖ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಅಕ್ಟೋಬರ್ 2020, 17:13 IST
Last Updated 22 ಅಕ್ಟೋಬರ್ 2020, 17:13 IST
ಕಾರ್ಯಸ್ಥಳದಲ್ಲಿ ಅನುಕೂಲ ಕಲ್ಪಿಸುವಂತೆ ಆಗ್ರಹಿಸಿ ಅರ್ಜೆಂಟೀನಾ ಸಂಸತ್‌ ಎದುರು ಬುಧವಾರ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ನರ್ಸ್‌ಗಳು. ಚಿತ್ರ: ಎಎಫ್‌ಪಿ
ಕಾರ್ಯಸ್ಥಳದಲ್ಲಿ ಅನುಕೂಲ ಕಲ್ಪಿಸುವಂತೆ ಆಗ್ರಹಿಸಿ ಅರ್ಜೆಂಟೀನಾ ಸಂಸತ್‌ ಎದುರು ಬುಧವಾರ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ನರ್ಸ್‌ಗಳು. ಚಿತ್ರ: ಎಎಫ್‌ಪಿ   

ನವದೆಹಲಿ: ‌ವಿಶ್ವದಲ್ಲಿ ಈ ವರೆಗೆ ಕೊರೊನಾ ವೈರಸ್‌ ಸೋಂಕಿಗೆ ಒಳಗಾದವರ ಸಂಖ್ಯೆ 4.17 ಕೋಟಿ ದಾಟಿದ್ದು, ಮಹಾಮಾರಿಗೆ ಈವರೆಗೆ 11,39,647 ಮಂದಿ ಪ್ರಾಣ ತೆತ್ತಿದ್ದಾರೆ. ಇನ್ನು 3.10 ಕೋಟಿಗೂ ಹೆಚ್ಚು ಜನ ಗುಣಮುಖರಾಗಿದ್ದಾರೆ ಹಾಗೂ 95,35,675 ಸಕ್ರಿಯ ಪ್ರಕರಣಗಳಿವೆ.

ಅಮೆರಿಕದಲ್ಲಿ 86 ಲಕ್ಷಕ್ಕೂ ಅಧಿಕ ಪ್ರಕರಣಗಳು

ವಿಶ್ವದಲ್ಲೇ ಅತಿ ಹೆಚ್ಚು ಸೋಂಕಿತರನ್ನು ಹೊಂದಿರುವ ಅಮೆರಿಕದಲ್ಲಿ ಒಟ್ಟು 86 ಲಕ್ಷ ಪ್ರಕರಣಗಳನ್ನು ದಾಟಿದೆ. ಅಲ್ಲಿ ಸದ್ಯ 86,07,785 ಸೋಂಕಿತರಿದ್ದಾರೆ. ಈ ಪೈಕಿ 56,13,849 ಮಂದಿ ಗುಣಮುಖರಾಗಿದ್ದಾರೆ. 2,27,696 ಮಂದಿ ಮೃತಪಟ್ಟಿದ್ದಾರೆ ಎಂದು ಕೋವಿಡ್‌ ಟ್ರ್ಯಾಕರ್‌ ವೆಬ್‌ಸೈಟ್‌ ವರ್ಲ್ಡೋಮೀಟರ್‌ನಲ್ಲಿ ಉಲ್ಲೇಖಿಸಲಾಗಿದೆ.

ADVERTISEMENT

ಇನ್ನುಳಿದಂತೆ ಭಾರತ ಎರಡನೇ ಸ್ಥಾನದಲ್ಲಿದೆ. ಒಟ್ಟು 77,56,206 ಪ್ರಕರಣಗಳಿರುವ ಭಾರತದಲ್ಲಿ ಈ ವರೆಗೆ 1,17,277 ಮಂದಿ ಮೃತಪಟ್ಟಿದ್ದಾರೆ. 69,41,238 ಮಂದಿ ಗುಣಮುಖರಾಗಿದ್ದಾರೆ.

ಬ್ರೆಜಿಲ್‌ನಲ್ಲಿ 53,03,520 ಪ್ರಕರಣಗಳಿದ್ದು, 1,55,500 ಮಂದಿ ಮೃತಪಟ್ಟಿದ್ದಾರೆ. ರಷ್ಯಾದಲ್ಲಿ 14,63,306 ಪ್ರಕರಣಗಳಿವೆ. 25,242 ಮಂದಿ ಮೃತಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.