ADVERTISEMENT

ಕೋವಿಡ್‌: ರಷ್ಯಾದಲ್ಲಿ ಸತತ ಐದನೇ ದಿನ ಸಾವಿರಕ್ಕೂ ಹೆಚ್ಚು ಸಾವು!

ರಾಯಿಟರ್ಸ್
Published 23 ಅಕ್ಟೋಬರ್ 2021, 11:07 IST
Last Updated 23 ಅಕ್ಟೋಬರ್ 2021, 11:07 IST
ಶನಿವಾರ ಮಾಸ್ಕೊದ ಆಸ್ಪತ್ರೆಯೊಂದರಲ್ಲಿ ವೈದ್ಯೆಯೊಬ್ಬರು ಐಸಿಯುನಲ್ಲಿ ಕೊರೊನಾ ಪೀಡಿತರನ್ನು ಉಪಚರಿಸಿದರು. ರಾಯಿಟರ್ಸ್‌ ಚಿತ್ರ
ಶನಿವಾರ ಮಾಸ್ಕೊದ ಆಸ್ಪತ್ರೆಯೊಂದರಲ್ಲಿ ವೈದ್ಯೆಯೊಬ್ಬರು ಐಸಿಯುನಲ್ಲಿ ಕೊರೊನಾ ಪೀಡಿತರನ್ನು ಉಪಚರಿಸಿದರು. ರಾಯಿಟರ್ಸ್‌ ಚಿತ್ರ   

ಮಾಸ್ಕೊ: ರಷ್ಯಾದಲ್ಲಿ ಕೋವಿಡ್ ಸಾವಿನ ಸಂಖ್ಯೆ ಹೆಚ್ಚುತ್ತಿದೆ. ಹೊಸದಾಗಿ 1,075 ಮಂದಿ ಮೃತಪಟ್ಟಿದ್ದು, ಸತತ ಐದನೇ ದಿನ ಒಂದು ಸಾವಿರಕ್ಕೂ ಹೆಚ್ಚು ಸಾವು ಸಂಭವಿಸಿದೆ.

ಸೋಂಕು ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಮಾಸ್ಕೊ ಮತ್ತು ಇತರೆಡೆ ಕೆಲಸದ ಸ್ಥಳಗಳನ್ನು ಬಂದ್‌ ಮಾಡಲು ಮತ್ತು ದೇಶದಾದ್ಯಂತ ಮತ್ತೆ ಪೂರ್ಣ ಪ್ರಮಾಣದ ಲಾಕ್‌ಡೌನ್‌ ವಿಧಿಸಲೂ ರಷ್ಯಾ ಸಿದ್ಧತೆ ನಡೆಸಿದೆ.

ಶನಿವಾರ 37,678 ಹೊಸ ಪ್ರಕರಣಗಳು ದೃಢಪಟ್ಟಿವೆ ವಿಶ್ವದ ಮೊದಲ ಕೋವಿಡ್‌ ಲಸಿಕೆ ಅಭಿವೃದ್ಧಿ ಪಡಿಸಿದ ಹೆಗ್ಗಳಿಕೆ ಇದ್ದರೂ, ಮೂರನೇ ಒಂದರಷ್ಟು ಜನಸಂಖ್ಯೆಗೆ ಇನ್ನೂ ಲಸಿಕೆ ನೀಡಲಾಗಿಲ್ಲ.

ADVERTISEMENT

ಅಧ್ಯಕ್ಷ ವಾಡಿಮಿರ್ ಪುಟಿನ್‌ ಅವರು ನವೆಂಬರ್ ಮೊದಲ ವಾರದಲ್ಲಿ ದೇಶವ್ಯಾಪಿ ಲಾಕ್‌ಡೌನ್‌ ವಿಧಿಸಲು ಸಮ್ಮತಿಸಿದ್ದರು. ಮಾಸ್ಕೊದಲ್ಲಿ ಅಕ್ಟೋಬರ್‌ ತಿಂಗಳಿನಿಂದ ಭಾಗಶಃ ಲಾಕ್‌ಡೌನ್‌ ವಿಧಿಸಲಾಗಿದ್ದು, ಅಗತ್ಯ ಸೇವೆಗಳು ಹಾಗೂ ಸೂಪರ್‌ಮಾರ್ಕೆಟ್‌ ತೆರೆಯಲು ಮಾತ್ರ ಅನುಮತಿ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.