ADVERTISEMENT

ವಿಶ್ವದ 17.5 ಕೋಟಿಗೂ ಹೆಚ್ಚು ಜನರನ್ನು ತೀವ್ರ ಬಡತನಕ್ಕೆ ತಳ್ಳಿದ ಕೋವಿಡ್‌

ತೀವ್ರ ಬಡತನ ಮತ್ತು ಮಾನವ ಹಕ್ಕುಗಳ ವರದಿಗಾರ ಒಲಿವಿಯರ್ ಡಿ ಷುಟರ್ ವಿಶ್ವಸಂಸ್ಥೆಯಲ್ಲಿ ಹೇಳಿಕೆ

ಪಿಟಿಐ
Published 23 ಅಕ್ಟೋಬರ್ 2020, 8:23 IST
Last Updated 23 ಅಕ್ಟೋಬರ್ 2020, 8:23 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ವಿಶ್ವಸಂಸ್ಥೆ: ಕೋವಿಡ್‌ 19 ಸಾಂಕ್ರಾಮಿಕ ರೋಗ ವಿಶ್ವದಾದ್ಯಂತ 17.5 ಕೋಟಿಗೂ ಹೆಚ್ಚು ಜನರನ್ನು ತೀವ್ರ ಬಡತನಕ್ಕೆ ತಳ್ಳಿದೆ ಎಂದು ವಿಶ್ವಸಂಸ್ಥೆಯಲ್ಲಿನತೀವ್ರ ಬಡತನ ಮತ್ತು ಮಾನವ ಹಕ್ಕುಗಳ ಕುರಿತ ವಿಶೇಷ ವರದಿಗಾರ ಒಲಿವಿಯರ್ ಡಿ ಷುಟರ್ ಹೇಳಿದ್ದಾರೆ.

ಬುಧವಾರ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಮೂರನೇ ಸಮಿತಿ (ಸಾಮಾಜಿಕ, ಮಾನವೀಯ ಮತ್ತು ಸಾಂಸ್ಕೃತಿಕ)ಯಲ್ಲಿ ಭಾಗವಹಿಸಿದ್ದ ವಿವಿಧ ದೇಶಗಳ ಪ್ರತಿನಿಧಿಗಳ ಸಮ್ಮುಖದಲ್ಲಿ ಷುಟರ್, ಕೋವಿಡ್ 19 ಸಮಯದಲ್ಲಿ ವಿಶ್ವದಾದ್ಯಂತ ದುರ್ಬಲ ವರ್ಗದ ಜನರು ಅನುಭವಿಸುತ್ತಿರುವ ಸಂಕಟಗಳ ಬಗ್ಗೆ ಕಳವಳ ವ್ಯಕ್ತಪಡಿಸಿದರು.

’ನಮ್ಮ ಅಭಿವೃದ್ಧಿ ಮಾದರಿಗಳ ಬಗ್ಗೆ ಮರುಚಿಂತನೆ ಮಾಡುವ ಅಗತ್ಯವಿದೆ’ ಎಂದು ಸಲಹೆ ನೀಡಿದ ಷುಟರ್, ’ಕೋವಿಡ್‌ 19 ಸಾಂಕ್ರಾಮಿಕ ಅವಧಿಯಲ್ಲಿ ತೀವ್ರ ಬಡತನಕ್ಕೆ ತಳ್ಳಲ್ಪಟ್ಟಿರುವ ದುರ್ಬಲ ವರ್ಗದರಲ್ಲಿ ಬಹುತೇಕರು ಮಹಿಳೆಯರು’ ಎಂದು ಉಲ್ಲೇಖಿಸಿದ್ದಾರೆ.

ADVERTISEMENT

‘1929ರ ಮಹಾ ಆರ್ಥಿಕ ಕುಸಿತದ ನಂತರದ ಆ ಭೀಕರ ಬಿಕ್ಕಟ್ಟಿನಿಂದ ಹೊರಬರಲು ನಾವು 20ನೇ ಶತಮಾನದಲ್ಲಿ ಅನುಸರಿಸಿದ ಮಾರ್ಗವನ್ನೇ ಈಗ ಅನುಸರಿಸಲು ಸಾಧ್ಯವಿಲ್ಲ’ ಎಂದು ಹೇಳಿದ್ದಾರೆ. ದೇಶಗಳಲ್ಲಿ ಕುಸಿದಿರುವ ಆರ್ಥಿಕತೆಯನ್ನು ಸರಿಪಡಿಸುವಾಗ ಪರಿಸರ ಸುಸ್ಥಿರತೆ ಮತ್ತು ಸಾಮಾಜಿಕ ನ್ಯಾಯವನ್ನು ಪರಿಗಣಿಸಬೇಕು ಎಂದು ಷುಟರ್‌ ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.