ADVERTISEMENT

ಕೋವಿಡ್‌–19ಗೆ ಲಸಿಕೆ ಮುಂದಿನ ವರ್ಷ ಲಭ್ಯ

ವಿಶ್ವ ಆರೋಗ್ಯ ಸಂಸ್ಥೆ

ರಾಯಿಟರ್ಸ್
Published 24 ಜುಲೈ 2020, 8:58 IST
Last Updated 24 ಜುಲೈ 2020, 8:58 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ವಾಷಿಂಗ್‌ಟನ್: ಜಗತ್ತಿನ ನಿದ್ದೆಗೆಡಿಸಿರುವ ಕೋವಿಡ್‌–19 ವೈರಸ್‌ ನಿಯಂತ್ರಣಕ್ಕೆ ವಿಜ್ಞಾನಿಗಳು ಲಸಿಕೆ ಸಂಶೋಧನೆಯಲ್ಲಿ ತೊಡಗಿದ್ದು, ಇನ್ನೇನು ಲಸಿಕೆ ಸಿಕ್ಕೇ ಬಿಡ್ತು ಎಂದು ಜನರು ನೆಮ್ಮದಿಯ ನಿಟ್ಟುಸಿರು ಬಿಡುತ್ತಿರುವಾಗಲೇ ವಿಶ್ವಸಂಸ್ಥೆಯು ‘ಲಸಿಕೆ ಸದ್ಯಕ್ಕಿಲ್ಲ’ ಎಂದು ಹೇಳಿ ಅಚ್ಚರಿ ಮೂಡಿಸಿದೆ.

‘ಮುಂದಿನ ವರ್ಷದವರೆಗೆ ಕೋವಿಡ್‌–19 ಲಸಿಕೆ ದೊರೆಯುವುದು ಕಷ್ಟ’ ಎಂದು ವಿಶ್ವ ಆರೋಗ್ಯ ಸಂಸ್ಥೆಯ ತುರ್ತು ಸೇವೆಗಳ ವಿಭಾಗದ ಮುಖ್ಯಸ್ಥ ಮೈಕ್‌ ರೈನ್‌ ಸುಳಿವು ನೀಡಿದ್ದಾರೆ.ಕೋವಿಡ್‌–19 ಲಸಿಕೆ ಸಂಶೋಧನೆಯಲ್ಲಿ ಉತ್ತಮ ಪ್ರಗತಿ ಕಂಡು ಬಂದಿದ್ದು, 2021ರ ಮೊದಲಾರ್ಧದ (ಜೂನ್‌) ವೇಳೆಗೆ ಲಸಿಕೆ ಜನರ ಬಳಕೆಗೆ ಸಿಗಲಿದೆ ಎಂದು ಹೇಳಿದ್ದಾರೆ.

ಹಲವು ಲಸಿಕೆಗಳು ಎರಡು ಹಂತಗಳ ಪರೀಕ್ಷೆಗಳಲ್ಲಿಯಶಸ್ವಿಯಾಗಿದ್ದು, ಮೂರನೇ ಹಂತದ ಪ್ರಯೋಗಕ್ಕೆ ಒಡ್ಡಿಕೊಂಡಿವೆ. ಇಲ್ಲಿಯವರೆಗೆ ಪರೀಕ್ಷಾರ್ಥ ಹಂತದಲ್ಲಿ ಯಾವ ಲಸಿಕೆಯೂ ವಿಫಲವಾಗಿಲ್ಲ. ಸುರಕ್ಷತೆ ಮತ್ತು ರೋಗನಿರೋಧಕ ಶಕ್ತಿ ವೃದ್ಧಿಗೆ ಸಂಬಂಧಿಸಿದಂತೆ ಎಲ್ಲವೂ ಉತ್ತಮ ಫಲಿತಾಂಶ ನೀಡಿವೆ ಎಂದು ರೈನ್‌ ತಿಳಿಸಿದ್ದಾರೆ.

ADVERTISEMENT

ಈ ಲಸಿಕೆ ಶ್ರೀಮಂತರಿಗೆ ಮಾತ್ರವಲ್ಲ, ಜಗತ್ತಿನ ಎಲ್ಲ ಬಡವರಿಗೂ ಸುಲಭವಾಗಿ ಮತ್ತು ಅಗ್ಗದ ದರದಲ್ಲಿ ಸಿಗುವಂತಾಗಬೇಕು. ಆ ದಿಸೆಯಲ್ಲಿ ಲಸಿಕೆ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಲು ವಿಶ್ವ ಆರೋಗ್ಯ ಸಂಸ್ಥೆ ಕೆಲಸ ಮಾಡುತ್ತಿದೆ ಎಂದು ತಿಳಿಸಿದ್ದಾರೆ.

ಸಮುದಾಯಕ್ಕೆ ಹಬ್ಬಿರುವ ಕೊರೊನಾ ಸೋಂಕು ನಿಯಂತ್ರಣಕ್ಕೆ ಬರುವರೆಗೂ ಶಾಲೆಗಳನ್ನು ತೆರೆಯಲು ಆತುರ ಬೇಡ. ಶಿಕ್ಷಣ ಮತ್ತು ಭವಿಷ್ಯದ ದೃಷ್ಟಿಯಿಂದ ಮಕ್ಕಳನ್ನು ಮರಳಿ ಶಾಲೆಗೆ ಕರೆತರುವುದು ಅಗತ್ಯ. ಹಾಗಂತ, ಆತುರದ ನಿರ್ಧಾರ ಬೇಡ. ಈ ಬಗ್ಗೆ ಶಾಲೆಗಳು ಎಚ್ಚರಿಕೆಯಿಂದ ನಿರ್ಧಾರ ತೆಗೆದುಕೊಳ್ಳಬೇಕು ಎಂದು ರೈನ್‌ ಕಿವಿಮಾತು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.