ADVERTISEMENT

ಗಾಂಧಿ ನೆನಪಲ್ಲಿ ಸೈಕಲ್‌ ರ‍್ಯಾಲಿ

ಪಿಟಿಐ
Published 15 ಜುಲೈ 2019, 20:15 IST
Last Updated 15 ಜುಲೈ 2019, 20:15 IST
   

ಜೋಹಾನ್ಸ್‌ಬರ್ಗ್‌: ಗಾಂಧೀಜಿ ಅವರ 150ನೇ ಜನ್ಮದಿನಾಚರಣೆ ಅಂಗವಾಗಿ ಅವರ ತತ್ವಗಳ ಕುರಿತು ಅರಿವು ಮೂಡಿಸುವ ಸಲುವಾಗಿ ಸೈಕಲ್‌ ರ‍್ಯಾಲಿ ಆಯೋಜಿಸಲಾಗಿತ್ತು.

ಗಾಂಧಿ ನಡಿಗೆ ಸಮಿತಿ ಸಹಯೋಗದಲ್ಲಿ ಭಾರತದ ರಾಜತಾಂತ್ರಿಕ ಅಧಿಕಾರಿಗಳು ಈ ಕಾರ್ಯಕ್ರಮ ಆಯೋಜಿಸಿದ್ದರು.

ಭಾರತೀಯರು ಅಧಿಕ ಸಂಖ್ಯೆಯಲ್ಲಿರುವ ಲೆನಾಶಿಯಾದಿಂದ ಸೈಕಲ್‌ ರ‍್ಯಾಲಿಗೆ ಚಾಲನೆ ನೀಡಲಾಯಿತು.

ADVERTISEMENT

‘ಗಾಂಧೀಜಿ ಅವರ ತತ್ವಗಳಾದ ಸತ್ಯ, ಅಹಿಂಸೆ ಕುರಿತು ಅರಿವು ಮೂಡಿಸುವ ಸಲುವಾಗಿ ರ‍್ಯಾಲಿ ಆಯೋಜಿಸಲಾಗಿದೆ. ದಕ್ಷಿಣ ಆಫ್ರಿಕಾಕ್ಕೆ ಭಾರತ ವಕೀಲರನ್ನು ಕಳುಹಿಸಿತು. ಆದರೆ ನಾವು ಮಹಾತ್ಮನನ್ನು ವಾಪಸ್‌ ಕಳುಹಿಸಿದೆವು. ಹಾಗಾಗಿ ಇದು ಕರ್ಮಭೂಮಿ’ ಎಂದು ಕಾನ್ಸುಲ್‌– ಜನರಲ್‌ ಕೆ.ಜಿ. ಶ್ರೀನಿವಾಸ್‌ಅವರು ತಿಳಿಸಿದರು.

‘ಗಾಂಧೀಜಿ ಸಮುದಾಯ ಅಭಿವೃದ್ಧಿಗೆ ಒತ್ತು ನೀಡಿದ್ದರು. ಅದೇ ಉದ್ದೇಶದಿಂದ ಸೈಕಲ್‌ ರ‍್ಯಾಲಿ ಆಯೋಜಿಸಲಾಗಿದೆ. ವೈಯಕ್ತಿಕ ಆರೋಗ್ಯದ ಜೊತೆಗೆ ಪರಿಸರ ಸಂರಕ್ಷಣೆಗೆ ಮಹತ್ವ ನೀಡುವುದು ಇದರ ಉದ್ದೇಶ’ ಎಂದುಭಾರತೀಯ ಹೈಕಮಿಷನರ್ ಜಯದೀಪ್ ಸರ್ಕಾರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.