ADVERTISEMENT

‘ಡಿಯರ್‌ ಮೋದಿ’– ಹೀಗೆಂದು ಪಾಕ್ ಪ್ರಧಾನಿ ಇಮ್ರಾನ್‌ ಬರೆದ ಪತ್ರದಲ್ಲಿ ಏನಿದೆ?

ನರೇಂದ್ರ ಮೋದಿ ಬರೆದಿದ್ದ ಪತ್ರಕ್ಕೆ ಪ್ರತಿಕ್ರಿಯೆ

ಪಿಟಿಐ
Published 20 ಸೆಪ್ಟೆಂಬರ್ 2018, 18:22 IST
Last Updated 20 ಸೆಪ್ಟೆಂಬರ್ 2018, 18:22 IST
ಇಮ್ರಾನ್ ಖಾನ್
ಇಮ್ರಾನ್ ಖಾನ್   

ಇಸ್ಲಾಮಾಬಾದ್: ಪಾಕಿಸ್ತಾನದ ನೂತನ ಪ್ರಧಾನಿ ಇಮ್ರಾನ್ ಖಾನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು,ಉಭಯ ದೇಶಗಳ ‘ಬಾಂಧವ್ಯಕ್ಕೆ ಸವಾಲೊಡ್ಡಿರುವ’ ಭಯೋತ್ಪಾದನೆ, ಕಾಶ್ಮೀರ ಬಿಕ್ಕಟ್ಟು ಸೇರಿದಂತೆ ಪ್ರಮುಖ ವಿಷಯಗಳ ಕುರಿತು ಹೊಸದಾಗಿ ದ್ವಿಪಕ್ಷೀಯ ಮಾತುಕತೆ ಪುನರಾರಂಭದ ಪ್ರಸ್ತಾಪ ಇರಿಸಿದ್ದಾರೆ.

‘‌ಎರಡೂ ದೇಶಗಳ ನಡುವೆ ಶಾಂತಿ ಸ್ಥಾಪಿಸುವ ಇಚ್ಛೆ ಇದೆ. ಈ ತಿಂಗಳು ನ್ಯೂಯಾರ್ಕ್‌ನಲ್ಲಿ ನಡೆಯುವ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿನ ಸಾರ್ಕ್‌ ಸದಸ್ಯ ರಾಷ್ಟ್ರಗಳ ಅನೌಪಚಾರಿಕ ಸಭೆಗೂ ಮೊದಲು,ವಿದೇಶಾಂಗ ಸಚಿವರಾದ ಶಾ ಮೆಹಮೂದ್‌ ಖುರೇಷಿ ಹಾಗೂ ಸುಷ್ಮಾ ಸ್ವರಾಜ್ ಅವರು ಮಾತುಕತೆ ನಡೆಸಬಹುದು’ ಎಂದು ಸೆಪ್ಟೆಂಬರ್ 14ರ ಪತ್ರದಲ್ಲಿ ಇಮ್ರಾನ್ ಬರೆದಿದ್ದಾರೆ.

ಮೋದಿ ಅವರು ಆಗಸ್ಟ್ 18ರಂದು ಬರೆದಿದ್ದ ಪತ್ರಕ್ಕೆ ಪ್ರತಿಕ್ರಿಯೆಯಾಗಿ ಬರೆದಿರುವ ಈ ಪತ್ರದಲ್ಲಿ ‘ಭಾರತ ಮತ್ತು ಪಾಕಿಸ್ತಾನ ನಿರಾಕರಿಸಲಾಗದಂತಹ ಸವಾಲಿನ ಬಾಂಧವ್ಯ ಹೊಂದಿವೆ. ಜಮ್ಮು ಮತ್ತು ಕಾಶ್ಮೀರ ವಿವಾದ ಸೇರಿದಂತೆ ಎಲ್ಲಾ ಸಮಸ್ಯೆಗಳನ್ನೂ ಶಾಂತಿಯುತವಾಗಿ ಪರಿಹರಿಸಿಕೊಳ್ಳಲು ನಮ್ಮ ಜನರಿಗೆ, ವಿಶೇಷವಾಗಿ ಮುಂದಿನ ತಲೆಮಾರುಗಳಿಗೆ ನಾವು ಬದ್ಧರಾಗಿರಬೇಕು’ ಎಂದು ಇಮ್ರಾನ್ ಹೇಳಿದ್ದಾರೆ.

ADVERTISEMENT

ತಾವು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದಾಗ ಅಭಿನಂದನೆ ಸಲ್ಲಿಸಿ ಶುಭ ಕೋರಿದ್ದಕ್ಕಾಗಿ ಮೋದಿ ಅವರಿಗೆ ಇಮ್ರಾನ್‌ ಧನ್ಯವಾದ ಸಲ್ಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.