ADVERTISEMENT

ಯುರೋಪ್‌ ‍ಪ್ರವಾಹ: ಮೃತರ ಸಂಖ್ಯೆ 150ಕ್ಕೆ ಏರಿಕೆ

ಏಜೆನ್ಸೀಸ್
Published 17 ಜುಲೈ 2021, 7:50 IST
Last Updated 17 ಜುಲೈ 2021, 7:50 IST
ಜರ್ಮನಿಯ ಎರ್ಫ್ಟ್‌ಸ್ಟಾಡ್ ಪಟ್ಟಣದಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿರುವ ಸಿಬ್ಬಂದಿ      –ರಾಯಿಟರ್ಸ್‌ ಚಿತ್ರ
ಜರ್ಮನಿಯ ಎರ್ಫ್ಟ್‌ಸ್ಟಾಡ್ ಪಟ್ಟಣದಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿರುವ ಸಿಬ್ಬಂದಿ      –ರಾಯಿಟರ್ಸ್‌ ಚಿತ್ರ   

ಬರ್ಲಿನ್‌: ಯುರೋ‍ಪ್‌ನ ಪಶ್ಚಿಮ ಭಾಗಗಳಲ್ಲಿ ಭಾರಿ ಮಳೆಯಿಂದಾಗಿ ಸಂಭವಿಸಿದ ಪ್ರವಾಹದಲ್ಲಿ ಸಾವಿಗೀಡಾದವರ ಸಂಖ್ಯೆ ಶನಿವಾರ 150ಕ್ಕೆ ಏರಿದೆ. ಇಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.

‘ಪ್ರವಾಹ ಪೀಡಿತ ಪ್ರದೇಶವಾದ ಜರ್ಮನಿಯ ಅಹ್ರ್ವೀಲರ್ ಕೌಂಟಿಯಲ್ಲಿ 90ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಈ ಪ್ರದೇಶದಲ್ಲಿ ಪ್ರವಾಹದಿಂದಾಗಿ ಅತಿ ಹೆಚ್ಚು ಹಾನಿ ಉಂಟಾಗಿದೆ’ ಎಂದು ಪೊಲೀಸರು ತಿಳಿಸಿದರು.

‘ರಹಿನೆಲ್ಯಾಂಡ್-ಪಾಲಟಿನೇಟ್‌ನಲ್ಲಿ 63 ಮಂದಿ ಮೃತಪಟ್ಟಿದ್ದಾರೆ’ ಎಂದು ಅಧಿಕಾರಿಗಳುಶುಕ್ರವಾರ ಹೇಳಿದ್ದರು.

ADVERTISEMENT

ಶನಿವಾರದ ವೇಳೆಗೆ ಪ್ರವಾಹ ಪೀಡಿತ ಪ್ರದೇಶಗಳಿಂದ ನೀರಿನ ಮಟ್ಟ ಕಡಿಮೆಯಾಗಿದೆ. ಆದರೆ ಪ್ರವಾಹದಲ್ಲಿ ಕೊಚ್ಚಿ ಹೋಗಿರುವ ಹಲವು ಕಾರು, ಟ್ರಕ್‌ಗಳಲ್ಲಿ ಶವಗಳು ಪತ್ತೆಯಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.