ADVERTISEMENT

ಟ್ರಂಪ್‌ರನ್ನು ವಾಗ್ದಂಡನೆಯಿಂದ ಖುಲಾಸೆಗೊಳಿಸಬೇಡಿ: ಡೆಮಾಕ್ರಟಿಕ್ ಸದಸ್ಯರ ಒತ್ತಾಯ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2021, 6:49 IST
Last Updated 12 ಫೆಬ್ರುವರಿ 2021, 6:49 IST
ಡೊನಾಲ್ಡ್ ಟ್ರಂಪ್‌
ಡೊನಾಲ್ಡ್ ಟ್ರಂಪ್‌   

ವಾಷಿಂಗ್ಟನ್‌: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಅವರನ್ನು ವಾಗ್ದಂಡನೆಗೆ ಒಳಪಡಿಸುವ ಸಂಬಂಧ ಎರಡನೇ ಬಾರಿಗೆ ವಿಚಾರಣೆ ನಡೆಯುತ್ತಿದ್ದು, ಈ ಪ್ರಕರಣದಿಂದ ಟ್ರಂಪ್ ಅವರನ್ನು ಖುಲಾಸೆಗೊಳಿಸದಂತೆ ರಿಪಬ್ಲಿಕನ್ ಪಕ್ಷದ‌ ಸೆನೆಟರ್‌ಗಳನ್ನು ಒತ್ತಾಯಿಸಿದ್ದಾರೆ.

ವಿಚಾರಣೆ ವೇಳೆ, ‘ಕ್ಯಾಪಿಟಲ್ ಹಿಲ್ಸ್‌ ಮೇಲೆ ದಾಳಿ ನಡೆಸಲು ತಮ್ಮ ಬೆಂಬಲಿಗರನ್ನು ಟ್ರಂಪ್ ಪ್ರಚೋದಿಸಿದ್ದರು‘ ಎಂದು ಸದಸ್ಯರು ಆರೋಪಿಸಿದ್ದಾರೆ.

ವಾಗ್ದಂಡನೆ ಪ್ರಕ್ರಿಯೆಯ ವ್ಯವಸ್ಥಾಪಕರು ಜ.6ರಂದು ನಡೆದ ದಾಳಿಗೆ ಸಂಬಂಧಿಸಿದ ಆತಂಕ ಹುಟ್ಟಿಸುವಂತಹ ಕೆಲವು ವಿಡಿಯೊ ತುಣುಕುಗಳನ್ನು ಸದಸ್ಯರ ಮುಂದೆ ಪ್ರದರ್ಶಿಸಿದರು. ಈ ದಾಳಿ ಅಮೆರಿಕದ ಇತಿಹಾಸದಲ್ಲೇ ಅತ್ಯಂತ ಕರಾಳ ಅಧ್ಯಾಯ ಎಂದು ಬಣ್ಣಿಸಿದರು. ಈ ಹಿಂದೆ ಬಹಿರಂಗಪಡಿಸದ ದೃಶ್ಯಗಳ ತುಣುಕುಗಳನ್ನೂ ಈ ಸಮಯದಲ್ಲಿ ಪ್ರದರ್ಶಿಸಿದರು.

ADVERTISEMENT

‘ಇಷ್ಟೆಲ್ಲ ಘಟನೆ ನಡೆದಿದ್ದರೂ ಇದು ವಾಗ್ದಂಡನೆಗೆ ಗುರಿ ಮಾಡುವಂತಹ ವಿಷಯವಲ್ಲ ಎಂದು ನೀವು ಭಾವಿಸುವುದಾದರೆ, ನಾವು ಏನು ಮಾಡಲು ಸಾಧ್ಯ‘ ಎಂದು ವಾಗ್ದಂಡನೆ ಪ್ರಕ್ರಿಯೆಯ ವ್ಯವಸ್ಥಾಪಕ ಜೇಮಿ ರಾಸ್ಕಿನ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.