ADVERTISEMENT

ನಿರೀಕ್ಷೆ ಹುಸಿಗೊಳಿಸಿದ ಅಮೆರಿಕ ಮಧ್ಯಂತರ ಚುನಾವಣೆ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2022, 15:48 IST
Last Updated 9 ನವೆಂಬರ್ 2022, 15:48 IST
ಟ್ರಂಪ್‌
ಟ್ರಂಪ್‌   

ವಾಷಿಂಗ್ಟನ್‌ (ಪಿಟಿಐ): ಅಮೆರಿಕ ಸಂಸತ್ತಿಗೆ (ಹೌಸ್ ಆಫ್‌ ರೆಪ್ರಸೆಂಟಿಟೀವ್ಸ್) ನಡೆದ ಮಧ್ಯಂತರ ಚುನಾವಣೆಗೆ ಸಂಬಂಧಿಸಿದಂತೆ ನಡೆಸಿದ ಸಮೀಕ್ಷೆಗಳೆಲ್ಲಾ ಹುಸಿ ಆಗುವ ಸಾಧ್ಯತೆಗಳಿದ್ದು, ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ರಿಪಬ್ಲಿಕನ್ ಪಾರ್ಟಿ ಮುನ್ನಡೆಗೆ ಬರುವ ಸಾಧ್ಯತೆ ಇದೆ.

ಡೆಮಾಕ್ರಟಿಕ್‌ ಮತ್ತು ರಿಪಬ್ಲಿಕ್‌ ಪಕ್ಷದ ಮಧ್ಯೆ ನಿಕಟ ಪೈಪೋಟಿ ಏರ್ಪಟ್ಟಿದ್ದು, ಒಟ್ಟು 435 ಬಲ ಹೊಂದಿದೆ. 371 ಕ್ಷೇತ್ರಗಳಲ್ಲಿ ಚುನಾವಣೆ ನಡೆದಿತ್ತು. ಡೆಮಾಕ್ರಟಿಕ್‌ ಪಕ್ಷ 172 ಕ್ಷೇತ್ರಗಳಲ್ಲಿ ಜಯ ಗಳಿಸಿದರೆ, ರಿಪಬ್ಲಿಕ್ ಪಕ್ಷ 200 ಕ್ಷೇತ್ರಗಳಲ್ಲಿ ಜಯಗಳಿಸಿ ಮುನ್ನಡೆ ಸಾಧಿಸಿದೆ. ಬಹುಮತಕ್ಕೆ 218 ಸ್ಥಾನಗಳನ್ನು ಗೆಲ್ಲಬೇಕಿದೆ.

ಸೆನೆಟ್‌ಗೆ ಉಭಯ ಪಕ್ಷಗಳು ತಲಾ 48 ಸ್ಥಾನಗಳನ್ನು ಗೆದ್ದುಕೊಂಡಿವೆ. ಸೆನೆಟ್‌ ಒಟ್ಟು 100 ಸದಸ್ಯರನ್ನು ಹೊಂದಿದೆ.

ADVERTISEMENT

ಒಟ್ಟಾರೆ ಜನಪ್ರತಿನಿಧಿಗಳ ಸಭೆಯ ರೇಸಿನಲ್ಲಿ ಆಡಳಿತಾರೂಢ ಡೆಮಾಕ್ರಟಿಕ್‌ ಪಕ್ಷ ತೀವ್ರ ಹಿನ್ನಡೆಯನ್ನು ಅನುಭವಿಸುತ್ತಿದ್ದು, ಜನರು ರಿಪಬ್ಲಿಕ್ ಪಕ್ಷದತ್ತ ವಾಲುತ್ತಿರುವುದು ಕಂಡುಬರುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.