
ಪಿಟಿಐ
ಡಾಕಾ: ಬಾಂಗ್ಲಾ ದೇಶದ ಮಧ್ಯಂತರ ಸರ್ಕಾರವು ಸುರಕ್ಷತೆ ದೃಷ್ಟಿಯಿಂದ ವೀಸಾ ಸೇವೆಯನ್ನು ಅಮಾನತಿನಲ್ಲಿ ಇಡುವಂತೆ ನವದೆಹಲಿ ಸೇರಿ ಭಾರತದಲ್ಲಿರುವ ತನ್ನ ಪ್ರಮುಖ ಅಧಿಕಾರಿಗಳಿಗೆ ಗುರುವಾರ ಸೂಚನೆ ನೀಡಿದೆ.
ವಿದೇಶಾಂಗ ವ್ಯವಹಾರಗಳ ಸಲಹೆಗಾರ ಎಂ. ತೌಹಿದ್ ಹುಸೇನ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಭಾರತದಲ್ಲಿರುವ ನಮ್ಮ ಮೂವರು ಅಧಿಕಾರಿಗಳಿಗೆ ವೀಸಾ ವಿಭಾಗಗಳನ್ನು ತಾತ್ಕಾಲಿಕವಾಗಿ ಮುಚ್ಚಲು ತಿಳಿಸಿದ್ದೇವೆ’ ಎಂದರು.
‘ಇದಲ್ಲದೇ, ಅಮೆರಿಕ ಇತ್ತೀಚೆಗಷ್ಟೆ ಜಾರಿ ಮಾಡಿರುವ ವಿಸಾ ಬಾಂಡ್ (ಗ್ಯಾರಂಟಿ) ಅಗತ್ಯದ ಆದೇಶವನ್ನು ರದ್ದು ಮಾಡುವಂತೆ ಮನವಿ ಮಾಡಿಕೊಳ್ಳಲಾಗಿದೆ’ ಎಂದರು.
ಭಾರತ ಈ ಹಿಂದೆ 2024ರ ಆಗಸ್ಟ್‌ನಲ್ಲಿ ಬಾಂಗ್ಲಾದೇಶಿ ನಾಗರಿಕರ ವೀಸಾ ಮೇಲೆ ನಿಯಂತ್ರಣ ಹೇರಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.