ADVERTISEMENT

ಭಾರತ- ಚೀನಾ ನಡುವಣ ಗಡಿ ಬಿಕ್ಕಟ್ಟು ಶಮನ ನೆರವಿಗೆ ಸಿದ್ಧ: ಡೊನಾಲ್ಡ್ ಟ್ರಂಪ್

ಪಿಟಿಐ
Published 25 ಸೆಪ್ಟೆಂಬರ್ 2020, 5:46 IST
Last Updated 25 ಸೆಪ್ಟೆಂಬರ್ 2020, 5:46 IST
ಡೊನಾಲ್ಡ್ ಟ್ರಂಪ್
ಡೊನಾಲ್ಡ್ ಟ್ರಂಪ್   

ವಾಷಿಂಗ್ಟನ್: ಭಾರತ ಮತ್ತು ಚೀನಾ ನಡುವೆ ಇರುವ ಗಡಿ ಬಿಕ್ಕಟ್ಟನ್ನು ಉಭಯ ದೇಶಗಳು ಬಗೆಹರಿಸಿಕೊಳ್ಳಲಿವೆ ಆಶಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ವಿವಾದ ಇತ್ಯರ್ಥಕ್ಕೆ ನೆರವು ನೀಡಲು ತಾನು ಸಿದ್ಧ ಎಂದು ಪುನರುಚ್ಚರಿಸಿದ್ದಾರೆ.

‘ಚೀನಾ ಮತ್ತು ಭಾರತ ಈಗ ಸಂಕಷ್ಟವನ್ನು ಎದುರಿಸುತ್ತಿವೆ ಎಂಬುದು ನನಗೆ ತಿಳಿದಿದೆ. ಅದನ್ನು ಬಗೆಹರಿಸಿಕೊಳ್ಳಲಿವೆ ಎಂಬ ವಿಶ್ವಾಸವೂ ಇದೆ. ಅವರು ಬಯಸಿದರೆ ನಾನು ಪ್ರೀತಿಯಿಂದಲೇ ನೆರವಾಗುತ್ತೇನೆ’ ಎಂದು ಟ್ರಂಪ್ ಹೇಳಿದರು.

ಎರಡು ತಿಂಗಳಿಂದ ಗಡಿಯಲ್ಲಿ ಮೂಡಿರುವ ಉದ್ವಿಗ್ನ ಸ್ಥಿತಿ ಬಗೆಹರಿಸಲು ಚೀನಾ-ಭಾರತ ನಡುವಣ ಸೇನಾ ಹಂತದ ಮಾತುಕತೆ ನಡೆದಿರುವ ಹೊತ್ತಿನಲ್ಲಿಯೇ ಟ್ರಂಪ್‌ ಅವರ ಈ ಹೇಳಿಕೆ ಹೊರಬಂದಿದೆ.

ADVERTISEMENT

ಈ ನಡುವೆ ವಾಲ್ ಸ್ಟ್ರೀಟ್ ಜನರಲ್, ‘ಗಡಿಯಲ್ಲಿ ಬಿಕ್ಕಟ್ಟಿನ ಪರಿಸ್ಥಿತಿಯಿಂದಾಗಿ ಭಾರತವು ಈಗ ಬೆಂಬಲವನ್ನು ನಿರೀಕ್ಷಿಸುವಂತಾಗಿದೆ’ ಎಂದು ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.