ADVERTISEMENT

ಡೊನಾಲ್ಡ್‌ ಟ್ರಂಪ್ ವಕೀಲ ರೂಡಿ ಜೂಲಿಯಾನಿಗೆ ಕೋವಿಡ್–19 ದೃಢ

ಏಜೆನ್ಸೀಸ್
Published 7 ಡಿಸೆಂಬರ್ 2020, 5:09 IST
Last Updated 7 ಡಿಸೆಂಬರ್ 2020, 5:09 IST
ರೂಡಿ ಗಿಲಾನಿ (ರಾಯಿಟರ್ಸ್ ಚಿತ್ರ)
ರೂಡಿ ಗಿಲಾನಿ (ರಾಯಿಟರ್ಸ್ ಚಿತ್ರ)   

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರ ವಕೀಲ ರೂಡಿ ಜೂಲಿಯಾನಿ ಅವರಿಗೆಭಾನುವಾರ ಕೋವಿಡ್–19 ದೃಢಪಟ್ಟಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಟ್ರಂಪ್‌, ‘ನ್ಯೂಯಾರ್ಕ್‌ನ ಇತಿಹಾಸದಲ್ಲೇ ಶ್ರೇಷ್ಠ ಮೇಯರ್‌ ಹಾಗೂ ಅಮೆರಿಕದ ಇತಿಹಾಸದಲ್ಲೇ ಅತ್ಯಂತ ಭ್ರಷ್ಟ ಚುನಾವಣೆಯನ್ನು ಹೊರಗೆಳೆಯಲು ದಣಿವರಿಯದೆ ಶ್ರಮಿಸುತ್ತಿರುವ ರೂಡಿ ಜೂಲಿಯಾನಿ ಅವರಿಗೆ ಚೀನೀ ವೈರಸ್‌ ಸೋಂಕು ದೃಢಪಟ್ಟಿದೆ’ ಎಂದು ಟ್ವೀಟ್ ಮಾಡಿದ್ದಾರೆ.

ರೂಡಿ ಅವರು ವಾಷಿಂಗ್ಟನ್‌ನಲ್ಲಿರುವ ಜಾರ್ಜ್‌ಟೌನ್‌ ವಿಶ್ವವಿದ್ಯಾಲಯದ ಆಸ್ಪತ್ರೆಯಲ್ಲಿ ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮೂಲಗಳು ತಿಳಿಸಿರುವುದಾಗಿ ರಾಯಿಟರ್ಸ್‌ ವರದಿ ಮಾಡಿವೆ. ಇನ್ನೂ ಕೆಲವು ಮಾಧ್ಯಮಗಳು, ಇದುವರೆಗೆ ಯಾವುದೇ ಆಸ್ಪತ್ರೆಗಳಿಗೆ ದಾಖಲಾಗಿಲ್ಲ ಎಂದು ತಿಳಿಸಿವೆ.ಆದರೆ, ಸೋಂಕು ತಗುಲಿರುವ ಬಗ್ಗೆ ರೂಡಿ ಅವರಾಗಲೀ, ಚಿಕಿತ್ಸೆ ಪಡೆಯುತ್ತಿರುವ ಬಗ್ಗೆ ಯಾವುದೇ ಆಸ್ಪತ್ರೆಯವರು ಖಚಿತಪಡಿಸಿಲ್ಲ.

ADVERTISEMENT

ಅಮೆರಿಕದಲ್ಲಿ ಇದುವರೆಗೆ ಒಟ್ಟು 1.51 ಕೋಟಿ ಪ್ರಕರಣಗಳು ವರದಿಯಾಗಿದ್ದು, ಇದರಲ್ಲಿ 2.88 ಲಕ್ಷಕ್ಕೂ ಹೆಚ್ಚು ಸೋಂಕಿತರು ಮೃತಪಟ್ಟಿದ್ದಾರೆ. 88.55 ಲಕ್ಷ ಮಂದಿ ಗುಣಮುಖರಾಗಿದ್ದಾರೆ. ಇಲ್ಲಿ ಇನ್ನೂ 60 ಲಕ್ಷ ಪ್ರಕರಣಗಳು ಸಕ್ರಿಯವಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.