ADVERTISEMENT

ಕುಗ್ಗುತ್ತಿದೆ ಟ್ರಂಪ್ ಜನಪ್ರಿಯತೆ: ಇಳಿಕೆಯಾಯ್ತು ಭಾಷಣ ವೀಕ್ಷಿಸುವರ ಸಂಖ್ಯೆ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2020, 3:13 IST
Last Updated 6 ಫೆಬ್ರುವರಿ 2020, 3:13 IST
ಡೊನಾಲ್ಡ್‌ ಟ್ರಂಪ್‌
ಡೊನಾಲ್ಡ್‌ ಟ್ರಂಪ್‌   

ನ್ಯೂಯಾರ್ಕ್‌:ದಿನ ಕಳೆದಂತೆ ಡೊನಾಲ್ಡ್‌ ಟ್ರಂಪ್‌ ಅವರ ಜನಪ್ರಿಯತೆ ಕುಗ್ಗುತ್ತಿದೆ ಎಂದು ಅಮೆರಿಕದ ಮಾಹಿತಿ, ದತ್ತಾಂಶ ಸಂಸ್ಥೆ ನೀಲ್ಸನ್ ಹೋಲ್ಡಿಂಗ್ಸ್ ವರದಿ ಬಹಿರಂಗಪಡಿಸಿದೆ.

ಬುಧವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಮಾಡಿದ ವಾರ್ಷಿಕ ಸ್ಟೇಟ್‌ ಆಫ್‌ ದಿ ಯೂನಿಯನ್‌ ಭಾಷಣವನ್ನು ಫಾಕ್ಸ್‌ ಸುದ್ದಿ ವಾಹಿನಿ ಹೊರತುಪಡಿಸಿ ಬಹುತೇಕ ಎಲ್ಲಾ ಪ್ರಮುಖ ವಾಹಿನಿಗಳಲ್ಲಿ ನಿರೀಕ್ಷಿಸಿದಷ್ಟುಜನರು ವೀಕ್ಷಿಸಿಲ್ಲ ಎಂದು ವರದಿ ಹೇಳಿದೆ.

ಸಂಸ್ಥೆಯ ವರದಿಯ ಪ್ರಕಾರ, 12 ಪ್ರಮುಖ ವಾಹಿನಿಗಳಲ್ಲಿ ಒಟ್ಟಾರೆ ಟ್ರಂಪ್‌ ಭಾಷಣವನ್ನು ವೀಕ್ಷಿಸಿದವರ ಸಂಖ್ಯೆ ಅಂದಾಜು 3.72 ಕೋಟಿ. ಕಳೆದ ವರ್ಷ ಈ ಸಂಖ್ಯೆ 4.68 ಕೋಟಿ ಇತ್ತು.

ADVERTISEMENT

ಫಾಕ್ಸ್‌ ನ್ಯೂಸ್‌ನಲ್ಲಿ ಹೆಚ್ಚು ಜನ ವೀಕ್ಷಿಸಿದ್ದಾರೆ. 1.16 ಕೋಟಿ ಮಂದಿ ಈ ವಾಹಿನಿಯಲ್ಲಿ ಟ್ರಂಪ್‌ ಭಾಷಣವನ್ನು ನೋಡಿದ್ದಾರೆ. ಕಳೆದ ಬಾರಿಗಿಂತ ಶೇ 2ರಷ್ಟು ಹೆಚ್ಚು ವೀಕ್ಷಕತ್ವವನ್ನು ಇದು ಪಡೆದಿದೆ. ಆದರೆ, ಬೇರೆ ವಾಹಿನಿಗಳಲ್ಲಿ ಇದು ಕುಸಿತ ಕಂಡಿದೆ. ಎಂಎಸ್‌ಎನ್‌ಬಿಸಿನಲ್ಲಿ ಕಳೆದ ಬಾರಿಗಿಂತ ಶೇ 41ರಷ್ಟು ಕಡಿಮೆಯಾಗಿದೆ, ಎನ್‌ಬಿಸಿನಲ್ಲಿ ಶೇ 33, ಸಿಬಿಎಸ್‌ ಮತ್ತು ಎಬಿಸಿನಲ್ಲಿ ಶೇ 30ರಷ್ಟು ವೀಕ್ಷಕರ ಕುಸಿತವಾಗಿದೆ ಎಂದು ವರದಿ ವಿವರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.