ADVERTISEMENT

ಗುಪ್ತಚರ ವಿಭಾಗದ ಮುಖ್ಯಸ್ಥನಾಗಿ ಜಾನ್‌ ರ್‍ಯಾಟ್‌ಕ್ಲಿಫ್‌ ನಾಮನಿರ್ದೇಶನ

ಏಜೆನ್ಸೀಸ್
Published 29 ಫೆಬ್ರುವರಿ 2020, 19:14 IST
Last Updated 29 ಫೆಬ್ರುವರಿ 2020, 19:14 IST
ಜಾನ್‌ ರ್‍ಯಾಟ್‌ಕ್ಲಿಫ್‌ 
ಜಾನ್‌ ರ್‍ಯಾಟ್‌ಕ್ಲಿಫ್‌    

ವಾಷಿಂಗ್ಟನ್‌: ಅಮೆರಿಕದ ಗುಪ್ತಚರ ವಿಭಾಗದ ಮುಖ್ಯಸ್ಥರಾಗಿ ರಿಪಬ್ಲಿಕನ್‌ ಪಕ್ಷದ ಸಂಸದ ಜಾನ್‌ ರ್‍ಯಾಟ್‌ಕ್ಲಿಫ್‌ ಅವರನ್ನು ನಾಮನಿರ್ದೇಶನ ಮಾಡಲಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಘೋಷಿಸಿದರು.

ಕಳೆದ ಕೆಲವು ತಿಂಗಳಿಂದ ಈ ಹುದ್ದೆ ಖಾಲಿ ಉಳಿದಿತ್ತು. ಮಹತ್ತರವಾದ ಈ ಹುದ್ದೆಗೆ ಶಾಶ್ವತ ನೇಮಕಾತಿ ವಿಳಂಬವಾಗುತ್ತಿರುವುದಕ್ಕೆ ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ಕಳೆದ ವರ್ಷ ಜುಲೈನಲ್ಲಿಡ್ಯಾನ್‌ ಕೋಟ್ಸ್‌ ರಾಷ್ಟ್ರೀಯ ಗುಪ್ತಚರ ವಿಭಾಗದ ನಿರ್ದೇಶಕ ಸ್ಥಾನ ತ್ಯಜಿಸಿದ ಬಳಿಕ ಈ ಹುದ್ದೆ ಖಾಲಿಯಾಗಿತ್ತು. ಭಯೋತ್ಪಾದನೆ ನಿಗ್ರಹದಲ್ಲಿ ತಜ್ಞರಾಗಿದ್ದ ಜೋಸೆಫ್‌ ಮೆಕ್‌ಗ್ವೈಯರ್‌ ಅವರನ್ನು ಗುಪ್ತಚರ ವಿಭಾಗದ ಹಂಗಾಮಿ ನಿರ್ದೇಶಕರಾಗಿ ಟ್ರಂಪ್ ನೇಮಿಸಿದ್ದರು. ಈ ವಿಭಾಗದಡಿ ಸಿಐಎ ಮತ್ತು ರಾಷ್ಟ್ರೀಯ ಭದ್ರತಾ ಸಂಸ್ಥೆ(ಎನ್‌ಎಸ್‌ಎ) ಸೇರಿದಂತೆ 17 ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ.

ಉಕ್ರೇನ್‌ ಒಪ್ಪಂದ ವಿಚಾರದಲ್ಲಿ ಸಿಐಎಯ ಸಿಬ್ಬಂದಿಯೊಬ್ಬರು ನೀಡಿದ್ದ ದೂರಿನ ಮೇಲೆ ಅಧಿಕಾರ ದುರ್ಬಳಕೆಯ ವಾಗ್ದಂಡನೆಯನ್ನು ಟ್ರಂಪ್‌ ಎದುರಿಸಬೇಕಾಗಿ ಬಂದಿತ್ತು. ಇದು ಟ್ರಂಪ್‌ ಅಸಮಾಧಾನಕ್ಕೂ ಕಾರಣವಾಗಿತ್ತು.ಗುಪ್ತಚರ ವಿಭಾಗದಿಂದಲೇಹೆಚ್ಚಿನ ಮಾಹಿತಿಗಳು ಸೋರಿಕೆ ಆಗುತ್ತಿರುವ ಕಾರಣದಿಂದ,ರಾಜಕೀಯವಾಗಿ ಹತ್ತಿರವಾಗಿರುವವರನ್ನೇ ವಿಭಾಗದ ಮುಖ್ಯಸ್ಥರನ್ನಾಗಿ ಮಾಡಲು ಟ್ರಂಪ್‌ ನಿರ್ಧರಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.