
ವಾಷಿಂಗ್ಟನ್: ಕ್ಯೂಬಾಕ್ಕೆ ತೈಲ ಮಾರಾಟ ಮಾಡುವ ಯಾವುದೇ ದೇಶದ ಮೇಲೆ ಸುಂಕ ವಿಧಿಸುವುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆದರಿಕೆ ಹಾಕಿದ್ದಾರೆ.
ಇದು ಮೆಕ್ಸಿಕೊ ಮೇಲೆ ಒತ್ತಡ ಹೇರುವ ಕ್ರಮವಾಗಿದ್ದು, ಈ ಕಾರ್ಯಕಾರಿ ಆದೇಶಕ್ಕೆ ಗುರುವಾರ ಟ್ರಂಪ್ ಸಹಿ ಹಾಕಿದ್ದಾರೆ. ಕ್ಯೂಬಾಕ್ಕೆ ತೈಲ ಮಾರಾಟ ಮಾಡುವ ಅಥವಾ ತೈಲ ಪೂರೈಸುವ ಯಾವುದೇ ದೇಶದ ಯಾವುದೇ ಸರಕಿನ ಮೇಲೆ ಅಮೆರಿಕ ಹೆಚ್ಚುವರಿ ಸುಂಕ ಹೇರಲಿದೆ ಎಂದು ಟ್ರಂಪ್ ಹೇಳಿದ್ದಾರೆ.
‘ಕ್ಯೂಬಾಕ್ಕೆ ತೈಲ ಮಾರಾಟವನ್ನು ಮೆಕ್ಸಿಕೊ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಇದು ‘ಸಾರ್ವಭೌಮ ನಿರ್ಧಾರ’ವೇ ಹೊರತು ಅಮೆರಿಕದ ಒತ್ತಡಕ್ಕೆ ಮಣಿದು ಅಲ್ಲ’ ಎಂದು ಮೆಕ್ಸಿಕೊ ಅಧ್ಯಕ್ಷೆ ಕ್ಲೌಡಿಯಾ ಶೇನ್‌ಬಾಮ್ ಹೇಳಿದ್ದಾರೆ.
ಕ್ಯೂಬಾ ಸರ್ಕಾರದಿಂದ ಅಂತರ ಕಾಯ್ದುಕೊಳ್ಳುವಂತೆ ಟ್ರಂಪ್ ಅವರು ಮೆಕ್ಸಿಕೊದ ಮೇಲೆ ಸತರ ಒತ್ತಡ ಹೇರುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.