ADVERTISEMENT

ಹತ್ತಾರು ತಾಲಿಬಾನಿಗಳನ್ನು ಕೊಂದು ಪಂಜ್‌ಶೇರ್ ಪ್ರಾಂತ್ಯ ವಶಕ್ಕೆ ಪಡೆದ ವಿರೋಧಿ ಪಡೆ

ಐಎಎನ್ಎಸ್
Published 24 ಆಗಸ್ಟ್ 2021, 5:33 IST
Last Updated 24 ಆಗಸ್ಟ್ 2021, 5:33 IST
ಪಂಜ್‌ಶೇರ್ ಸುತ್ತವರಿದ ತಾಲಿಬಾನ್: ಎಎಫ್‌ಪಿ ಚಿತ್ರ
ಪಂಜ್‌ಶೇರ್ ಸುತ್ತವರಿದ ತಾಲಿಬಾನ್: ಎಎಫ್‌ಪಿ ಚಿತ್ರ   

ಕಾಬೂಲ್: ಅಫ್ಗಾನಿಸ್ತಾನದಲ್ಲಿ ಪಂಜ್‌ಶೇರ್ ಪ್ರದೇಶದ ತಾಲಿಬಾನ್ ವಿರೋಧಿ ಆಂದೋಲನವು ಮೇಲುಗೈ ಸಾಧಿಸಿದ್ದು, ಉತ್ತರ ಬಾಗ್ಲಾನ್ ಪ್ರಾಂತ್ಯದಲ್ಲಿ ಹೊಸ ಸರ್ಕಾರವನ್ನು ರಚಿಸುವ ಮಾತುಕತೆಗಳು ಮುಂದುವರಿದಿವೆ.

ಪಂಜ್‌ಶೇರ್‌ನಲ್ಲಿ ತಾಲಿಬಾನ್ ವಿರುದ್ಧದ ಹೋರಾಟಗಾರರ ಎರಡನೇ ಗುಂಪು, ಹತ್ತಾರು ತಾಲಿಬಾನ್ ಹೋರಾಟಗಾರರನ್ನು ಕೊಂದು ಸಲಾಹ್ ಮತ್ತು ಬಾನು ಜಿಲ್ಲೆಗಳನ್ನು ಮರಳಿ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಹೇಳಿಕೊಂಡಿದೆ.

ಅಫ್ಗಾನಿಸ್ತಾನದ 34 ಪ್ರಾಂತ್ಯಗಳ ಪೈಕಿ ಪಂಜ್‌ಶೇರ್ ಮಾತ್ರ ತಾಲಿಬಾನ್ ಉಗ್ರಗಾಮಿಗಳ ವಶವಾಗಬೇಕಿದೆ ಎಂದು ಟಿಆರ್‌ಟಿ ವರ್ಲ್ಡ್ ವರದಿ ಮಾಡಿದೆ.

ಬಿಕ್ಕಟ್ಟಿನ ಕುರಿತಂತೆ ಬಂಡುಕೋರರು ಮತ್ತು ಪ್ರತಿರೋಧ ಚಳುವಳಿಗಾರರ ನಡುವೆ ಸಂಧಾನಮಾತುಕತೆ ಮುಂದುವರಿಯುತ್ತಿರುವ ಸಮಯದಲ್ಲೇ ಪಂಜ್‌ಶೇರ್‌ ಪ್ರಾಂತ್ಯವನ್ನು ತಾಲಿಬಾನ್ ಸುತ್ತುವರಿದಿದೆ ಎಂದು ವರದಿಯಾಗಿದೆ.

ವಾರಾಂತ್ಯದಲ್ಲಿ ತಾಲಿಬಾನ್ ವಿರೋಧಿ ಚಳುವಳಿಗಾರರು ಪುಲ್-ಎ-ಹಿಸಾರ್ ಪ್ರದೇಶವನ್ನು ಮರಳಿ ಪಡೆಯುವುದರೊಂದಿಗೆ, ಪಂಜ್‌ಶೇರ್‌ನ ಉತ್ತರದಲ್ಲಿರುವ ಬಾಗ್ಲಾನ್ ಪ್ರಾಂತ್ಯದ ಕನಿಷ್ಠ ಮೂರು ಜಿಲ್ಲೆಗಳು ಸೋವಿಯತ್ ವಿರೋಧಿ ಹೋರಾಟದ ನಾಯಕ ಅಹ್ಮದ್ ಶಾ ಮಸೂದ್ ಅವರ ಪುತ್ರ ಅಹ್ಮದ್‌ ಮಸೂದ್‌ ಪಡೆಗಳ ವಶದಲ್ಲಿವೆ ಎಂದು ತಿಳಿದುಬಂದಿದೆ.

ರಾಜಧಾನಿ ಕಾಬೂಲ್‌ನಿಂದ ಬಾಗ್ಲಾನ್ 120 ಕಿ.ಮೀ ದೂರದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.