ADVERTISEMENT

ಪೆರುಗ್ವೆ: ಮಹಾತ್ಮ ಗಾಂಧಿ ಪುತ್ಥಳಿ ಅನಾವರಣ ಮಾಡಿದ ಸಚಿವ ಜೈಶಂಕರ್‌

ಪಿಟಿಐ
Published 22 ಆಗಸ್ಟ್ 2022, 12:34 IST
Last Updated 22 ಆಗಸ್ಟ್ 2022, 12:34 IST
ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಅವರು ಅಸುನ್‌ಸಿಯೋನ್‌ಯಲ್ಲಿ ಮಹಾತ್ಮ ಗಾಂಧಿ ಅವರ ಪುತ್ಥಳಿಯನ್ನು ಅನಾವರಣಗೊಳಿಸಿದರು –ಪಿಟಿಐ ಚಿತ್ರ
ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಅವರು ಅಸುನ್‌ಸಿಯೋನ್‌ಯಲ್ಲಿ ಮಹಾತ್ಮ ಗಾಂಧಿ ಅವರ ಪುತ್ಥಳಿಯನ್ನು ಅನಾವರಣಗೊಳಿಸಿದರು –ಪಿಟಿಐ ಚಿತ್ರ   

ಅಸುನ್‌ಸಿಯೋನ್‌ (ಪೆರುಗ್ವೆ) (ಪಿಟಿಐ): ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಅವರು ಪೆರುಗ್ವೆಯಲ್ಲಿ ಮಹಾತ್ಮ ಗಾಂಧಿ ಅವರ ಪುತ್ಥಳಿಯನ್ನು ಅನಾವರಣಗೊಳಿಸಿದರು. ನಂತರ ಇಲ್ಲಿನ ಕಾಸಾ ಡೆ ಲಾ ಇಂಡಿಪೆಡೆನ್ಸಿಯಾಕ್ಕೆ (ಐತಿಹಾಸಿಕ ಮಹತ್ವ ಇರುವ ವಸ್ತುಸಂಗ್ರಹಾಲಯ) ಭೇಟಿ ನೀಡಿದರು.

‘ಮಹಾತ್ಮ ಗಾಂಧೀಜಿ ಅವರ ಪುತ್ಥಳಿಯನ್ನು ಅನಾವರಣ ಮಾಡಿರುವುದು ಖುಷಿ ತಂದಿದೆ. ಪ್ರಮುಖ ಸ್ಥಳದಲ್ಲಿ ಪುತ್ಥಳಿ ನಿರ್ಮಾಣಕ್ಕೆ ನಿರ್ಧರಿಸಿದ ಅಸುನ್‌ಸಿಯೋನ್‌ ನಗರಸಭೆಗೆ ಅಭಿನಂದನೆ ತಿಳಿಸುತ್ತೇನೆ.’ ಎಂದು ಅವರು ಟ್ವೀಟ್‌ ಮಾಡಿದ್ದಾರೆ.

ಸಚಿವ ಜೈಶಂಕರ್‌ ಅವರುಆರು ದಿನಗಳವರೆಗೆ ದಕ್ಷಿಣ ಅಮೆರಿಕ ಪ್ರವಾಸದಲ್ಲಿದ್ದಾರೆ. ಪ್ರವಾಸದ ಮೊದಲ ದಿನ ಬ್ರೆಜಿಲ್‌ಗೆ ಬಂದಿಳಿದರು. ಇದೇ ಮೊದಲ ಬಾರಿಗೆ ಜೈಶಂಕರ್‌ ಅವರು ದಕ್ಷಿಣ ಅಮೆರಿಕಕ್ಕೆ ಅಧಿಕೃತ ಪ್ರವಾಸ ಕೈಗೊಂಡಿದ್ದಾರೆ. ಅರ್ಜೆಂಟಿನಾಕ್ಕೂ ಅವರು ಭೇಟಿ ನೀಡಲಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.