ADVERTISEMENT

ಪಾಕಿಸ್ತಾನದ ಲಾಹೋರ್‌ನಲ್ಲಿ ಪ್ರಬಲ ಭೂಕಂಪ; ಉತ್ತರ ಭಾರತದಲ್ಲೂ ಕಂಪನ 

ಏಜೆನ್ಸೀಸ್
Published 24 ಸೆಪ್ಟೆಂಬರ್ 2019, 12:18 IST
Last Updated 24 ಸೆಪ್ಟೆಂಬರ್ 2019, 12:18 IST
ಭೂಕಂಪದಿಂದ ಪಾಕಿಸ್ತಾನದ ಆಜಾದ್ ಕಾಶ್ಮಿರದ ಮೀರ್‌ ಪುರ ಜಿಲ್ಲೆಯಲ್ಲಿ ರಸ್ತೆ ದೊಡ್ಡ ಪ್ರಮಾಣದಲ್ಲಿ ಬಾಯ್ದೆರೆದು, ಹಾನಿಯಾಗಿದೆ. ಚಿತ್ರ: ಡಾನ್‌ ಟಿವಿ
ಭೂಕಂಪದಿಂದ ಪಾಕಿಸ್ತಾನದ ಆಜಾದ್ ಕಾಶ್ಮಿರದ ಮೀರ್‌ ಪುರ ಜಿಲ್ಲೆಯಲ್ಲಿ ರಸ್ತೆ ದೊಡ್ಡ ಪ್ರಮಾಣದಲ್ಲಿ ಬಾಯ್ದೆರೆದು, ಹಾನಿಯಾಗಿದೆ. ಚಿತ್ರ: ಡಾನ್‌ ಟಿವಿ   

ನವದೆಹಲಿ, ಇಸ್ಲಾಮಾಬಾದ್:ರಾಷ್ಟ್ರ ರಾಜಧಾನಿ ದೆಹಲಿ ಹಾಗೂ ಸುತ್ತಲಿನ ಪ್ರದೇಶ ಹಾಗೂ ಪಂಜಾಬ್‌ನಲ್ಲಿ ಮಂಗಳವಾರ ಸಂಜೆ ಭೂ ಕಂಪನ ಆಗಿದೆ.

ಪಾಕಿಸ್ತಾನದ ಲಾಹೋರ್‌ನಿಂದ 173 ಕಿ.ಮೀ. ವಾಯವ್ಯ ಭಾಗದಲ್ಲಿ ಸಂಜೆ ಪ್ರಬಲ ಭೂಕಂಪ ಸಂಭವಿಸಿದ್ದು, ರಿಕ್ಟರ್‌ ಮಾಪಕದಲ್ಲಿ 6.1ರಷ್ಟು ತೀವ್ರತೆ ದಾಖಲಾಗಿದೆ. ಎಂದು ಇಎಂಎಸ್‌ಸಿ ತಿಳಿಸಿದೆ ಎಂದು ಎಎನ್‌ಐ ವರದಿ ಮಾಡಿದೆ.

ಸಂಜೆ 4.30ರ ಸುಮಾರಿಗೆ ಪಾಕಿಸ್ತಾನ–ಭಾರತ ಗಡಿ ಪ್ರದೇಶದಲ್ಲಿ 6.3ರಷ್ಟು ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಭಾರತೀಯ ಹವಾಮಾನ ಇಲಾಖೆ(ಐಎಂಸಿ) ತಿಳಿಸಿದೆ.

ADVERTISEMENT

ಪಾಕಿಸ್ತಾನದ ಇಸ್ಲಾಮಾಬಾದ್‌, ಪೇಶಾವರ್‌, ರಾವಲ್‌ಪಿಂಡಿ, ಲಾಹೋರ್ ಸೇರಿದಂತೆ ಉತ್ತರ ಭಾಗದ ನಗರಗಳ ವ್ಯಾಪ್ತಿಯಲ್ಲಿ ಮಧ್ಯಾಹ್ನದ ಬಳಿಕ ಭೂಕಂಪ ಉಂಟಾಗಿದೆ. 8ರಿಂದ 10 ಸೆಕೆಂಡ್‌ ಭೂಮಿ ಕಂಪಿಸಿದ ಅನುಭವ ವಾಗಿದೆ ಎಂದು ಸ್ಥಳೀಯರು ಹೇಳಿದ್ದಾಗಿ ಪಾಕಿಸ್ತಾನದ ಡಾನ್‌ ಟಿವಿವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.