ADVERTISEMENT

ಇರಾನ್ ಭೂಕಂಪ: ಕುಸಿದ 40ಕ್ಕೂ ಹೆಚ್ಚು ಮನೆಗಳು, ಐವರ ಸಾವು

ಏಜೆನ್ಸೀಸ್
Published 8 ನವೆಂಬರ್ 2019, 19:42 IST
Last Updated 8 ನವೆಂಬರ್ 2019, 19:42 IST
ಇರಾನ್‌ನಲ್ಲಿ ಶುಕ್ರವಾರ ಸಂಭವಿಸಿದ ಭೂಕಂಪಕ್ಕೆ ಮನೆಯೊಂದು ಕುಸಿದಿರುವುದು –ರಾಯಿಟರ್ಸ್ ಚಿತ್ರ
ಇರಾನ್‌ನಲ್ಲಿ ಶುಕ್ರವಾರ ಸಂಭವಿಸಿದ ಭೂಕಂಪಕ್ಕೆ ಮನೆಯೊಂದು ಕುಸಿದಿರುವುದು –ರಾಯಿಟರ್ಸ್ ಚಿತ್ರ   

ಟೆಹರಾನ್‌: ಇರಾನ್‌ ವಾಯವ್ಯ ಭಾಗದಲ್ಲಿ ಶುಕ್ರವಾರ ಬೆಳಿಗ್ಗೆಸಂಭವಿಸಿದ ಭೂಕಂಪನಕ್ಕೆ ಐವರು ಮೃತಪಟ್ಟಿದ್ದು, 300 ಮಂದಿ ಗಾಯಗೊಂಡಿದ್ದಾರೆ.

ಭೂಕಂಪನ ತೀವ್ರತೆ ರಿಕ್ಟರ್‌ ಮಾಪಕದಲ್ಲಿ 5.9ರಷ್ಟು ಇತ್ತು. ಕಂಪನ ಕೇಂದ್ರವು ತಬ್ರೀಜ್‌ ನಗರದಿಂದ 120 ಕಿ. ಮೀ ದೂರದಲ್ಲಿದೆ.ಭೂಮೇಲ್ಪದರದ 8 ಕಿ.ಮೀ ಆಳದಲ್ಲಿ ಕಂಪನ ಸಂಭವಿಸಿದೆಎಂದು ಇರಾನ್‌ನ ಭೂಕಂಪನ ಮಾಪನ ಕೇಂದ್ರ ತಿಳಿಸಿದೆ.

ಹಲವು ಗ್ರಾಮಗಳಿಗೆ ಹಾನಿಯಾಗಿದ್ದು, 40ಕ್ಕೂ ಹೆಚ್ಚು ಮನೆಗಳು ಕುಸಿದಿವೆ. ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಲಾಗಿದೆ. 340 ಮಂದಿಯನ್ನು ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು,ಕಟ್ಟಡ ಅವಶೇಷಗಳಡಿ ಸಿಲುಕಿಕೊಂಡಿದ್ದ 100ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ. ಸುಮಾರು 200 ಜಾನುವಾರುಗಳು ಬಲಿಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

78 ಗ್ರಾಮಗಳಲ್ಲಿ ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದ್ದು, ತುರ್ತು ಕಾರ್ಯನಿರ್ವಹಣಾ ತಂಡಗಳು ರಕ್ಷಣಾ ಪರಿಕರಗಳನ್ನು ವಿತರಿಸಿವೆ. ವರ್ನಕೇಶ್‌ ಗ್ರಾಮದಲ್ಲಿ ನಿರಾಶ್ರಿತರ ಕೇಂದ್ರ ತೆರೆಯಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.