ಅಫ್ಗಾನಿಸ್ತಾನದ ಆಗ್ನೇಯ ಪ್ರಾಂತ್ಯದಲ್ಲಿ 6.0 ತೀವ್ರತೆಯ ಭೂಕಂಪ ಸಂಭವಿಸಿದೆ.
ಬುಧವಾರ ಬೆಳಗಿನ ಜಾವ ಭೂಕಂಪ ಸಂಭವಿಸಿದೆ ಎಂದು ಜಿಎಫ್‌ಝೆಡ್ ಜರ್ಮನ್ ರಿಸರ್ಚ್ ಸೆಂಟರ್ ವರದಿ ಮಾಡಿದೆ.
ವರದಿ ಪ್ರಕಾರ, ಸುಮಾರು 10 ಕಿ.ಮೀ. ವ್ಯಾಪ್ತಿಯಲ್ಲಿ ಭೂಕಂಪ ಉಂಟಾಗಿದ್ದು, ಈ ಪ್ರದೇಶ ಪಾಕಿಸ್ತಾನದ ಗಡಿಗೆ ಸಮೀಪದಲ್ಲಿದೆ.
ಭೂಕಂಪದಿಂದ ಉಂಟಾಗಿರುವ ಸಾವು–ನೋವಿನ ಕುರಿತು ವರದಿಯಾಗಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.