ಜಕಾರ್ತ: ಇಂಡೊನೇಷ್ಯಾದ ರಾಜಧಾನಿ ಜಕಾರ್ತದ ಸಮೀಪ ಬುಧವಾರ ಬೆಳಗ್ಗೆ ಭೂಕಂಪ ಉಂಟಾಗಿದ್ದು, ರಿಕ್ಟರ್ ಮಾಪಕದಲ್ಲಿ 6.9 ತೀವ್ರತೆ ದಾಖಲಾಗಿದೆ.
ಆದರೆ ತಕ್ಷಣಕ್ಕೆ ಯಾವುದೇ ಹಾನಿ ಸಂಭವಿಸಿದ ವರದಿಯಾಗಿಲ್ಲ ಎಂದು ಅಮೆರಿಕದ ವಿಜ್ಞಾನ ಸಂಸ್ಥೆ ತಿಳಿಸಿದೆ. ಬೆಳಗ್ಗೆ 3. 45ರ ಸುಮಾರಿಗೆಭೂಕಂಪ ಸಂಭವಿಸಿರುವುದನ್ನು ಭಾರತೀಯ ಭೂಕಂಪನ ಶಾಸ್ತ್ರ ಹಾಗೂ ಹವಾಮಾನ ಇಲಾಖೆಯು ಖಚಿತಪಡಿಸಿದೆ.
ಜಕಾರ್ತದಿಂದ 633 ಕಿ.ಮೀ ದೂರದದಲ್ಲಿನ ವಾಯವ್ಯ ಭಾಗದಲ್ಲಿ ಕಂಪನವಾಗಿದೆ.ಭೂಮಿಯ ಮೇಲ್ಮೈನಿಂದ 40 ಕಿ.ಮೀ ಆಳದಲ್ಲಿ ಭೂಕಂಪನದ ಕೇಂದ್ರ ಬಿಂದು ದಾಖಲಾಗಿದೆ.
ಇಂಡೊನೇಷ್ಯಾ ಜಗತ್ತಿನಲ್ಲಿ ಅತಿ ಹೆಚ್ಚು ನೈಸರ್ಗಿಕ ವಿಕೋಪಕ್ಕೆ ತುತ್ತಾಗುವ ದೇಶವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.