ಲಾಹೋರ್: ಭಾರತದಲ್ಲಿ ತಮಗಿರುವ ಸಂಪರ್ಕವನ್ನು ಬಳಸಿಕೊಂಡು ಈಗಿನ ಬಿಗುವಿನ ಸ್ಥಿತಿಯನ್ನು ಶಮನಗೊಳಿಸಲು ಮಾಜಿ ಪ್ರಧಾನಿ ನವಾಜ್ ಷರೀಫ್ ಯತ್ನಿಸಿದ್ದಾರೆ ಎಂದು ವರದಿಯಾಗಿದೆ.
ಭಾರತದ ದಾಳಿಗೆ ಪ್ರತಿಕ್ರಿಯಿಸಬೇಕು ಎಂದು ಪಕ್ಷಗಳು ಮತ್ತು ಜನರಿಂದ ಒತ್ತಡ ಹೆಚ್ಚಿರುವಂತೆಯೇ ನವಾಜ್ ಷರೀಫ್ ಹಿಂಬಾಗಿಲ ಮೂಲಕ ಪರಿಸ್ಥಿತಿ ಶಮನಕ್ಕೆ ಯತ್ನಿಸಿದ್ದಾರೆ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ನವಾಜ್ ಷರೀಫ್ ಅವರು ಪ್ರಧಾನಿ ಶೆಹಬಾಜ್ ಷರೀಫ್ ಅವರ ಅಣ್ಣ. ಗುರುವಾರ ನಡೆದ ಸಭೆಯಲ್ಲಿ ಅವರು ‘ರಾಜತಾಂತ್ರಿಕ ಮಾರ್ಗದಲ್ಲಿ ಪರಿಸ್ಥಿತಿ ಶಮನಕ್ಕೆ ಸಲಹೆ ಮಾಡಿದ್ದಾರೆ’ ಎಂದು ವರದಿಗಳು ಉಲ್ಲೇಖಿಸಿವೆ.
‘ಭಾರತದ ವಿರುದ್ಧ ದಾಳಿಯನ್ನು ತೀವ್ರಗೊಳಿಸುವುದರ ಪರವಾಗಿ ನಾನಿಲ್ಲ ಎಂದು ಷರೀಪ್ ಹೇಳಿದ್ದಾರೆ’ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ದೇಶದ ಸಾರ್ವಭೌಮತೆ ರಕ್ಷಣೆಗಾಗಿ ಸೇನಾ ಪಡೆಗಳು ದಾಳಿ ನಡೆಸಬೇಕು ಎಂದು ವಿವಿಧ ಪಕ್ಷಗಳ ಸದಸ್ಯರು ಒತ್ತಡ ಹೇರಿದ್ದಾರೆ ಎಂದು ನ್ಯೂಸ್ ಇಂಟರ್‌ನ್ಯಾಷನಲ್ ವರದಿ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.