ADVERTISEMENT

ಕೋವಿಡ್-19 ತುರ್ತು ನಿಧಿಗೆ ₹74 ಕೋಟಿ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2020, 19:03 IST
Last Updated 15 ಮಾರ್ಚ್ 2020, 19:03 IST
ವಿಡಿಯೊ ಕಾನ್ಫರೆನ್ಸ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ
ವಿಡಿಯೊ ಕಾನ್ಫರೆನ್ಸ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ   

ನವದೆಹಲಿ: ಸಾರ್ಕ್‌ ಪ್ರದೇಶಕ್ಕಾಗಿ ಕೋವಿಡ್‌–19 ತುರ್ತುನಿಧಿಯನ್ನು ಸ್ಥಾಪಿಸುವ ಪ್ರಸ್ತಾವವನ್ನು ಭಾರತ ಭಾನುವಾರ ಮುಂದಿಟ್ಟಿದೆ. ಜಗತ್ತಿನಲ್ಲೇ ಅತಿ ಹೆಚ್ಚು ಜನಸಂದಣಿಯಿರುವ, ಆದರೆ ಆರೋಗ್ಯ ಮೂಲಸೌಕರ್ಯ ಚೆನ್ನಾಗಿ ಇಲ್ಲದ ಈ ಪ್ರದೇಶದಲ್ಲಿ ಕೊರೊನಾ ವೈರಸ್‌ ಹರಡುವಿಕೆ ತಡೆಗೆ ಇಂತಹ ನಿಧಿ ಅಗತ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದ್ದಾರೆ.

ಸಾರ್ಕ್‌ ದೇಶಗಳ (ದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಸಂಘಟನೆ) ಮುಖ್ಯಸ್ಥರ ನಡುವೆ ನಡೆದ ವಿಡಿಯೊ ಕಾನ್ಫರೆನ್ಸ್‌ನಲ್ಲಿ ತುರ್ತುನಿಧಿಯ ವಿಚಾರವನ್ನು ಮೋದಿ ಮಂಡಿಸಿದ್ದಾರೆ. ಆರಂಭಿಕ ದೇಣಿಗೆಯಾಗಿ ಒಂದು ಕೋಟಿ ಡಾಲರ್‌ (ಸುಮಾರು ₹74 ಕೋಟಿ) ನೀಡುವುದಾಗಿಯೂ ಅವರು ಹೇಳಿದ್ದಾರೆ.

ಪಾಕಿಸ್ತಾನದ ಪ್ರಧಾನಿ ಇಮ್ರಾನ್‌ ಖಾನ್‌ ಅವರು ಈ ಸಭೆಯಲ್ಲಿ ಭಾಗಿಯಾಗಲಿಲ್ಲ. ಅವರ ಪ್ರತಿನಿಧಿಯಾಗಿ ವಿಶೇಷ ಸಹಾಯಕ ಝಫರ್‌ ಮಿರ್ಜಾ ಅವರಿದ್ದರು. ಉಳಿದ ಏಳು ರಾಷ್ಟ್ರಗಳ ಮುಖ್ಯಸ್ಥರು ಭಾಗಿಯಾಗಿದ್ದರು. ಕೊರೊನಾ ಪಿಡುಗಿಗೆ ಆತುರದ ಪ್ರತಿಕ್ರಿಯೆ ನೀಡುವುದು ಬೇಡ ಎಂಬ ಸಲಹೆಯನ್ನು ಮೋದಿ ಕೊಟ್ಟರು. ಶಂಕಿತರ ಮಾದರಿ ಪರೀಕ್ಷೆ, ತ್ವರಿತ ಪ್ರತಿಕ್ರಿಯೆ ತಂಡಗಳಿಗೆ ತರಬೇತಿಯಂತಹ ಸಹಕಾರವನ್ನು ಸಾರ್ಕ್‌ ದೇಶಗಳಿಗೆ ನೀಡಲು ಭಾರತ ಸಿದ್ಧ ಎಂಬ ಭರವಸೆಯನ್ನೂ ಕೊಟ್ಟರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.