ADVERTISEMENT

ಶನಿವಾರ ಸ್ವದೇಶಕ್ಕೆ ಪಾಕ್‌ ಮಾಜಿ ಪ್ರಧಾನಿ ನವಾಜ್‌ ಷರೀಫ್‌

ಪಿಟಿಐ
Published 20 ಅಕ್ಟೋಬರ್ 2023, 16:23 IST
Last Updated 20 ಅಕ್ಟೋಬರ್ 2023, 16:23 IST
<div class="paragraphs"><p>ನವಾಜ್‌ ಷರೀಫ್‌ </p></div>

ನವಾಜ್‌ ಷರೀಫ್‌

   

ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್‌ ಷರೀಫ್ ಅವರು 4 ವರ್ಷಗಳ ಬಳಿಕ ಶನಿವಾರ ಸ್ವದೇಶಕ್ಕೆ ಮರಳುವ ನಿರೀಕ್ಷೆಯಿದೆ. 4ನೇ ಬಾರಿಗೆ ಅಧಿಕಾರ ಗಳಿಸುವ ಪ್ರಯತ್ನದಲ್ಲಿ ಅವರು ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಪಕ್ಷ ಮುನ್ನಡೆಸಲಿದ್ದಾರೆ. 

73 ವರ್ಷದ, ಪಾಕಿಸ್ತಾನ್‌ ಮುಸ್ಲಿಂ ಲೀಗ್–ನವಾಜ್‌ (ಪಿಎಂಎಲ್–ಎನ್‌) ಪಕ್ಷದ ಮುಖಂಡರಾದ ಷರೀಫ್‌ ಸದ್ಯ ದುಬೈನಲ್ಲಿದ್ದಾರೆ. ಅಲ್ಲಿದ್ದ ಖಾಸಗಿ ವಿಮಾನದಲ್ಲಿ ಪಾಕ್‌ಗೆ ಬರುವ ಸಂಭವವಿದೆ. ನಂತರ ಲಾಹೋರ್‌ನಲ್ಲಿ ನಡೆಯುವ ಪಕ್ಷದ ರ‍್ಯಾಲಿಯಲ್ಲಿ ಭಾಗವಹಿಸುವ ಸಾಧ್ಯತೆಗಳಿವೆ.

ADVERTISEMENT

ತಮ್ಮ ವಿರುದ್ಧ ಇರುವ ಎರಡು ಪ್ರಕರಣಗಳಲ್ಲಿ ನಿರೀಕ್ಷಣಾ ಜಾಮೀನು ಪಡೆದಿರುವ ಕಾರಣ, ಸ್ವದೇಶಕ್ಕೆ ಮರಳುತ್ತಿದ್ದಂತೆ ಅವರನ್ನು ಬಂಧಿಸುವ ಸಾಧ್ಯತೆಗಳು ಇಲ್ಲ. 2020ರಲ್ಲಿ ಸ್ವಯಂ ಗಡೀಪಾರಿಗೆ ಒಳಗಾಗಿದ್ದ ಷರೀಫ್‌ ಅವರು ಲಂಡನ್‌ಗೆ ತೆರಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.